ADVERTISEMENT

ತೂಕಕ್ಕೆ ತಕ್ಕಂತೆ ವಿಮಾನ ಪ್ರಯಾಣ ದರ!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಸಿಡ್ನಿ (ರಾಯಿಟರ್ಸ್‌ ): ನೀವು ಸಣಕಲು ಎಂದು ಕೊರಗುತ್ತಿದ್ದೀರಾ? ಹಾಗಾದರೆ ಇನ್ನು ಮುಂದೆ ನೀವು ಅದಕ್ಕಾಗಿ ಕೊರಗುವ ಅಗತ್ಯವಿಲ್ಲ. ಸಣಕಲು ದೇಹದಿಂದಲೂ ಅನುಕೂಲ ಹೆಚ್ಚು. ನಿಮ್ಮ ದೇಹದ ತೂಕ ಕಡಿಮೆ ಇದ್ದಷ್ಟು ನಿಮ್ಮ ವಿಮಾನ ಪ್ರಯಾಣ ದರವನ್ನು ಉಳಿಸಬಹುದು.

ಹೌದು! ಸಿಡ್ನಿಯ ಖಾಸಗಿ ವಿಮಾನಯಾನ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ವ್ಯಕ್ತಿಯ ತೂಕದ ಆಧಾರದ ಮೇಲೆ ಪ್ರಯಾಣ ದರ ನಿಗದಿ ಮಾಡುವುದಾಗಿ ಘೋಷಿಸಿದೆ. ಒಂದು ವೇಳೆ ನೀವು ಸ್ಥೂಲ ಕಾಯದವರಾಗಿದ್ದರೆ ದುಪ್ಪಟ್ಟು ಟಿಕೆಟ್ ದರ ತೆರಬೇಕಾಗಬಹುದು!


ಕಳೆದ ವರ್ಷವಷ್ಟೆ ಆರಂಭವಾದ ಸಮೋನ್ ಏರ್‌ಲೈನ್ಸ್  ಪ್ರಯಾಣಿಕರಿಗಾಗಿ ಈ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಆ ಯೋಜನೆಗೆ ಪ್ರಯಾಣಿಕರ ತೂಕವನ್ನು ಮಾನದಂಡವನ್ನಾಗಿ ಮಾಡಿಕೊಂಡಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವ ವೇಳೆ ತಮ್ಮ ತೂಕವನ್ನು ನಮೂದಿಸಬೇಕು. ನಮೂದಿಸಿದ ತೂಕವನ್ನು ವಿಮಾನ ಏರುವ ಮುನ್ನ ಮತ್ತೆ ಪರೀಕ್ಷಿಸಲಾಗುತ್ತದೆ.

`ಪ್ರಪಂಚದ ಎಲ್ಲಾ ಜನರ ತೂಕದ ಪ್ರಮಾಣ ಒಂದೇ ಆಗಿರುತ್ತದೆ ಎಂಬ ಏರ್‌ಲೈನ್ಸ್ ನಂಬಿದೆ'  ಎಂದು ಸಮೋನ್ ವಿಮಾನಯಾನ ಸಂಸ್ಥೆ ಮುಖ್ಯಸ್ಥ ಕ್ರಿಸ್ ಲ್ಯಾಂಗ್‌ಟನ್ ತಿಳಿಸಿದ್ದಾರೆ. `ಯಾವುದೇ ವಿಮಾನವು ಒಟ್ಟು ಭಾರದ ಮೇಲೆ ಹಾರುತ್ತದೆಯೇ ಹೊರತು  ಸೀಟುಗಳ ಪ್ರಮಾಣದಲ್ಲಲ್ಲ. ಇದು ಭವಿಷ್ಯದ ವಿಮಾನ ಹಾರಾಟದ ಹೊಸ ತತ್ವವಾಗಲಿದ್ದು ಕುಟುಂಬ ಸದಸ್ಯರೊಂದಿಗೆ ಸಂಚರಿಸುವ ವೇಳೆ ಇದು ಅನುಕೂಲಕರವಾಗಲಿದೆ'  ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT