ADVERTISEMENT

ದೇಶ ಸೇವಕರೋ, ಸೋನಿಯಾ ಅಡಿಯಾಳೋ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST
ದೇಶ ಸೇವಕರೋ, ಸೋನಿಯಾ ಅಡಿಯಾಳೋ
ದೇಶ ಸೇವಕರೋ, ಸೋನಿಯಾ ಅಡಿಯಾಳೋ   

ಲಂಡನ್ (ಐಎಎನ್‌ಎಸ್): `ಡಾ. ಮನಮೋಹನ್ ಸಿಂಗ್ ಭಾರತದ ಉದ್ಧಾರಕರೋ ಅಥವಾ ಸೋನಿಯಾ ಗಾಂಧಿಯವರ ಅಡಿಯಾಳೋ...~?ಈ ಶೀರ್ಷಿಕೆಯಡಿ ಬ್ರಿಟನ್‌ನ `ದ ಇಂಡಿಪೆಂಡೆಂಟ್~ ಪತ್ರಿಕೆ ಪ್ರಧಾನಿ ಮನಮೋಹನ್ ಅವರ ಕುರಿತು ಲೇಖನ ಪ್ರಕಟಿಸಿದ್ದು ಸಿಂಗ್ ಮತ್ತೊಮ್ಮೆ ಮುಜುಗರ ಅನುಭವಿಸುವಂತಾಗಿದೆ.

 ಸಿಂಗ್ ಕಾರ್ಯವೈಖರಿ ಟೀಕಿಸಿ, ಅಮೆರಿಕದ ಟೈಮ್ ನಿಯತಕಾಲಿಕ ವರದಿ ಪ್ರಕಟಿಸಿದ ಕೆಲ ದಿನಗಳ ಅಂತರದಲ್ಲೇ `ದ ಇಂಡಿಪೆಂಡೆಂಟ್~ ಅದೇ ದಾಟಿಯ ವಿಶ್ಲೇಷಣೆ ಪ್ರಕಟಿಸಿದೆ.ಈ ವರದಿಯಲ್ಲಿ  `ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೈಜವಾದ ರಾಜಕೀಯ ಅಧಿಕಾರವಿಲ್ಲ. ಪ್ರಧಾನಿ ಹುದ್ದೆ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅವರು ಋಣಿಯಾಗಿದ್ದಾರೆ~ ಎಂದು ಸಿಂಗ್ ಅವರನ್ನು ಟೀಕಿಸಲಾಗಿದೆ.

`ಪ್ರಧಾನಿಯವರಿಗೆ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಒಮ್ಮಮ್ಮೆ ಅನಿಸುತ್ತದೆ. ಅಷ್ಟೇ ಅಲ್ಲ, ಯುಪಿಎ ಮೈತ್ರಿಕೂಟದಲ್ಲಿದ್ದ ಕಳಂಕಿತ ಸಚಿವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಲ್ಲಿಯೂ ಅವರು ವಿಫಲರಾಗಿದ್ದಾರೆ. ಅವರ ನಾಯಕತ್ವದ ಸರ್ಕಾರದಲ್ಲೇ 4000 ಕೋಟಿ ಡಾಲರ್ ಮೊತ್ತದ ಟೆಲಿಕಾಂ ಹಗರಣ ನಡೆದಿವೆ. ಇದರಿಂದ ಸಿಂಗ್ ಮತ್ತಷ್ಟು ದುರ್ಬಲರಾಗಿ ಕಾಣುತ್ತಾರೆ~
`ಸುಧಾರಣೆಯತ್ತ ಸಿಂಗ್ ತೋರುತ್ತಿದ್ದ ಉತ್ಸಾಹ ಬತ್ತಿ ಹೋಗಿದೆ, ದೇಶದ ಅಭಿವೃದ್ಧಿ ಕುಂಠಿತವಾಯಿತು ಎಂದು ಉದ್ಯಮಿಗಳು ಹೇಳುತ್ತಿದ್ದಾರೆ.~

`ಪ್ರಧಾನಿ ಸಿಂಗ್ ನೇತೃತ್ವದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅವರ ಪಕ್ಷದವರೇ ರಾಹುಲ್ ಗಾಂಧಿಯವರಿಗೆ ಅಧಿಕಾರ ಬಿಟ್ಟುಕೊಡಬೇಕೆಂದು ಪದೇ ಪದೇ ಒತ್ತಡ ಹೇರುತ್ತಿದ್ದಾರೆ ಎಂದು ರಾಜಕೀಯ ಎದುರಾಳಿಗಳು ಟೀಕಿಸುತ್ತಿದ್ದಾರೆ.~ಇದರಿಂದಾಗಿ ಮೃದು ಮಾತಿನ ಸಿಂಗ್ ಸಂಪೂರ್ಣ ವಿಫಲರಾದಂತೆ ಕಾಣುತ್ತಾರೆ ಎಂದು `ಇಂಡಿಪೆಂಡೆಂಟ್~ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.