ADVERTISEMENT

ನಿಧಿ ಸಂಗ್ರಹಣೆ ನೆಪ:ಭಾರತೀಯನ ಸೆರೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಲಂಡನ್ (ಪಿಟಿಐ): ರಾಜಕೀಯ ಪಕ್ಷವೊಂದರ ಪರವಾಗಿ ನಿಧಿ ಸಂಗ್ರಹಿಸುವ ಸಂದರ್ಭದಲ್ಲಿ ಹತ್ತು ಸಾವಿರ ಪೌಂಡ್ ಹಣ ನೀಡಿದರೆ ಪ್ರಧಾನಿ ಡೇವಿಡ್ ಕೆಮರಾನ್ ಅವರನ್ನು ಭೇಟಿ ಮಾಡಿಸುವುದರ ಜತೆ ಅವರ ಮೊಬೈಲ್ ಸಂಖ್ಯೆಯನ್ನೂ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿ ಇಲ್ಲಿನ ಪತ್ರಿಕೆಯೊಂದು ನಡೆಸಿದ ಮಾರುವೇಷದ ಕಾರ್ಯಾಚರಣೆ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ.

`ದಿ ಮೇಲ್ ಆನ್ ಸಂಡೆ~ ಪತ್ರಿಕೆ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ರಿಕ್ಕಿ ಸೆಹಗಲ್ (50) ಎಂದು ಗುರುತಿಸಲಾಗಿದೆ. ಈತ ಬ್ರಿಟಿಷ್ ಏಷ್ಯನ್ ಕನ್ಸರ್‌ವೇಟಿವ್ ಲಿಂಕ್ ಪಕ್ಷದ ಪರವಾಗಿ ನಿಧಿ ಸಂಗ್ರಹಿಸುತ್ತಿದ್ದು, ಹತ್ತು ಸಾವಿರ ಪೌಂಡ್ ಹಣ ನೀಡಿದರೆ ಪ್ರಧಾನಿ ಭೇಟಿ ಹಾಗೂ ಅವರ ಮೊಬೈಲ್ ಸಂಖ್ಯೆ ನೀಡುವುದಾಗಿ ಮಾರುವೇಷದ ಪತ್ರಕರ್ತನಿಗೆ ತಿಳಿಸಿದ್ದಾನೆ.

`ಪ್ರಧಾನಿ ಭೇಟಿ ಖಚಿತವೇ~ ಎನ್ನುವ ಪ್ರಶ್ನೆಗೆ ಶೇ ನೂರರಷ್ಟು ಸತ್ಯ ಎಂದೂ ಉತ್ತರಿಸಿದ್ದಾನಲ್ಲದೆ, ಪ್ರಧಾನಿ ಅಥವಾ ಇನ್ನಿತರ ಯಾವುದೇ ಸಚಿವರನ್ನೂ ತಾನು ಭೇಟಿ ಮಾಡಿಸುವುದಾಗಿ ತಿಳಿಸ್ದ್ದಿದ ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.