ಜೆರುಸಲೇಂ: ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಹೆಂಡತಿ ಸಾರಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಫೇಸ್ಬುಕ್ನಲ್ಲಿ ಬರೆದ ಪತ್ರಕರ್ತರೊಬ್ಬರಿಗೆ ಇಲ್ಲಿಯ ಕೋರ್ಟ್ ಸುಮಾರು ₹21ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ಇಸ್ರೇಲಿ ಮುಖಂಡರೊಬ್ಬರ ಜೊತೆ ಜಗಳವಾಡಿ ಅವರನ್ನು ಕಾರಿನಿಂದ ಸಾರಾ ಹೊರತಳ್ಳಿದ್ದಾರೆ ಎಂದು ಇಗಲ್ ಸರ್ನಾ ಎಂಬ ಪತ್ರಕರ್ತ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
ಪ್ರಧಾನಿಯವರ ಬೆಂಗಾವಲು ಪಡೆಯನ್ನು ಕರೆಸಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಪೋಸ್ಟ್ ದೇಶದ ತುಂಬೆಲ್ಲಾ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಬೆಂಜಮಿನ್ ಅವರು ಸರ್ನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.