ADVERTISEMENT

`ಪರಮಾಣು ವಿದ್ಯುತ್‌ಗೆ ಹಿಂದೇಟಿಲ್ಲ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಟೋಕಿಯೊ (ಎಎಫ್‌ಪಿ): ಫುಕುಶಿಮಾ ಪರಮಾಣು ದುರಂತದ ನಂತರದ ಪರಮಾಣು ನೀತಿಯ ಪರಾಮರ್ಶೆಯ ಹಿನ್ನೆಲೆಯಲ್ಲಿ  2040ರ ವೇಳೆಗೆ ಸಂಪೂರ್ಣವಾಗಿ ಪರಮಾಣು ಇಂಧನ ಅವಲಂಬನೆಯಿಂದ ಮುಕ್ತವಾಗುವ ಹಿಂದಿನ ಸರ್ಕಾರದ ನಿರ್ಧಾರವನ್ನು ಬದಲಾಯಿಸಲು ಜಪಾನಿನ ನೂತನ ಸರ್ಕಾರವು ಕಾರ್ಯೋನ್ಮುಖವಾಗಿದೆ.

ಪರಮಾಣು ನಿಯಂತ್ರಣ ಪ್ರಾಧಿಕಾರವು ಸುರಕ್ಷತೆಯ ಬಗ್ಗೆ ಖಾತ್ರಿ ನೀಡಿದರೆ ಮುಚ್ಚಿರುವ ಪರಮಾಣು ವಿದ್ಯುತ್ ಸ್ಥಾವರಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಉದಾರ ಉದ್ಯಮ ನೀತಿ ಪರವಾಗಿರುವ ಡೆಮಾಕ್ರಟಿಕ್ ಪಕ್ಷದ ಸರ್ಕಾರವು ತಿಳಿಸಿದೆ.

2040ರ ವೇಳೆಗೆ ಶೂನ್ಯ ಪರಮಾಣು ವಿದ್ಯುತ್ ನೀತಿ ಜಾರಿ ತರುವ ಹಿಂದಿನ ಸರ್ಕಾರದ ನಿರ್ಧಾರವನ್ನು ಪರಾಮರ್ಶಿಸುವ ಅಗತ್ಯವಿದ್ದು, ಸುರಕ್ಷತೆಯ ಬಗ್ಗೆ ಪ್ರಾಧಿಕಾರ ಖಾತ್ರಿ ನೀಡಿದಲ್ಲಿ ಮುಚ್ಚಿರುವ ಸ್ಥಾವರಗಳು ಮತ್ತು ಹೊಸ ಸ್ಥಾವರಗಳಿಗೆ ಅನುಮತಿ ನೀಡಲು ಹೊಸ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ತೊಶಿಮಿಸ್ತು ಮೊಟೆಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.