ADVERTISEMENT

ಪಾಕ್‌ಗೆ ತೈಲ: ಭಾರತ ಉತ್ಸುಕ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಭಾರತವು ವಾಘಾ ಗಡಿ ಭಾಗದವರೆಗೂ ಕೊಳವೆ ಮಾರ್ಗ ಅಳವಡಿಸುವ ಮೂಲಕ, ಪಾಕಿಸ್ತಾನಕ್ಕೆ ಅಗತ್ಯವಿರುವ ವಾರ್ಷಿಕ 5 ಕೋಟಿ ಟನ್‌ಗಳನ್ನು ಪೆಟ್ರೋಲ್, ಡೀಸೆಲ್ ಹಾಗೂ ಲೂಬ್ರಿಕೆಂಟ್‌ಗಳನ್ನು ರಫ್ತು ಮಾಡಲು ಉತ್ಸುಕವಾಗಿದೆ.

ಇಲ್ಲಿಗೆ ಆಗಮಿಸಿರುವ ಭಾರತದ ಪೆಟ್ರೋಲಿಯಂ ಸಚಿವಾಲಯದ ನಿರ್ದೇಶಕ (ಅಂತರರಾಷ್ಟ್ರೀಯ ಸಹಕಾರ) ಪಿ.ಕಲ್ಯಾಣಸುಂದರಂ ಅವರು ಪಾಕಿಸ್ತಾನದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಶಬ್ಬೀರ್ ಅಹಮ್ಮದ್ ಅವರೊಂದಿಗೆ ಸೋಮವಾರ ನಡೆಸಿದ ಮಾತುಕತೆ ವೇಳೆ ಈ ಪ್ರಸ್ತಾವ ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT