ADVERTISEMENT

ಪ್ರಧಾನಿಯನ್ನೇ ಪ್ರಶ್ನಿಸಿದ ಚಾಲಕ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಮೆಲ್ಬರ್ನ್, (ಪಿಟಿಐ):  ಆಕ್ಲಂಡ್‌ನಲ್ಲಿ ಕಳೆದ ಗುರುವಾರ ನಡೆದ ಪೆಸಿಫಿಕ್ ದ್ವೀಪ ದೇಶಗಳ ನಾಯಕರ ಸಭೆಯ ವೇಳೆ ಆಸ್ಟ್ರೇಲಿಯಾ ಪ್ರಧಾನಿಯನ್ನು ಚಾಲಕ ಬಸ್ ಒಳಗೆ ಬಿಟ್ಟುಕೊಳ್ಳದ ಪ್ರಸಂಗ ನಡೆದಿದೆ. 

ಹೋಟೆಲ್‌ನಿಂದ ಕರೆದೊಯ್ಯಲು ನಿಗದಿ ಮಾಡಿದ್ದ ಬಸ್ ಏರುತ್ತಿದ್ದ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರನ್ನು ತಡೆದ ಬಸ್ ಚಾಲಕ ಮತ್ತೊಂದು ಬಸ್‌ನಲ್ಲಿ ತೆರಳುವಂತೆ ಸೂಚಿಸಿದ. ಆ ವ್ಯಕ್ತಿ ಆಸ್ಟ್ರೇಲಿಯಾ ಪ್ರಧಾನಿ ಎಂಬ ವಿಷಯ ಚಾಲಕನಿಗೆ ಗೊತ್ತಿರಲಿಲ್ಲ. ನಂತರ ವಿಷಯ ತಿಳಿದ ಚಾಲಕ ಕ್ಷಮೆ ಯಾಚಿಸಿದ.

`ಭಯೋತ್ಪಾದನೆ ಮಾರಕ~

ಇಸ್ಲಾಮಾಬಾದ್,(ಐಎಎನ್‌ಎಸ್):  ಭಯೋತ್ಪಾದನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಷ್ಟ್ರದ ಜನತೆಗೆ ಈ ಸಂದೇಶ ನೀಡಿರುವ ಅವರು,ಉಗ್ರರು ತಮ್ಮ ರಾಜಕೀಯ ವಿಚಾರಧಾರೆ ಮತ್ತು ಕಾರ್ಯಸೂಚಿಯನ್ನು ಬಲವಂತವಾಗಿ ಜನರ ಮೇಲೆ ಹೇರುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.