ಲಂಡನ್ (ಐಎಎನ್‌ಎಸ್): ದೇಶದಾದ್ಯಂತ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ ಗರ್ಭಧಾರಣೆ ತಡೆಯುವ ಉದ್ದೇಶದಿಂದ ವೈದ್ಯರ ಅನುಮೋದನೆ ಮತ್ತು ಪೋಷಕರ ಅನುಮತಿ ಇಲ್ಲದೆ ಬ್ರಿಟನ್‌ನಲ್ಲಿ 13 ವರ್ಷದ ಒಳಗಿನ ಬಾಲಕಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ಎಲ್ಲ ಔಷಧಿ ಮಳಿಗೆಗಳಲ್ಲಿ ಉಚಿತವಾಗಿ ಪೂರೈಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಯೋಜನೆಯು ಪ್ರಾಯೋಗಿಕವಾಗಿ ಮ್ಯಾಂಚೆಸ್ಟರ್ ಮತ್ತು ಕ್ರೊಯ್ಡನ್ ನಗರಗಳಲ್ಲಿ ಜಾರಿಯಾಗಲಿದೆ ಎಂದು ತಿಳಿಸಿವೆ. ಆದರೆ, ಈ ಕ್ರಮ ಟೀಕೆಗಳಿಂದ ಹೊರತಾಗಿಲ್ಲ. ಈ ಯೋಜನೆ ಅಪಾಯಕಾರಿಯಾಗಿದ್ದು, ಅಪ್ರಾಪ್ತ ವಯಸ್ಸಿನವರ ಲೈಂಗಿಕ ಸಂಬಂಧಗಳನ್ನು ಕಾನೂನು ವ್ಯಾಪ್ತಿಗೆ ತರುವಂತಿದೆ ಎಂದು ಕ್ರೈಸ್ತ ಪ್ರಚಾರಕರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.