ADVERTISEMENT

ಬ್ರಿಟಿಷ್ ಸೈನಿಕರ ಮೆರವಣಿಗೆಯಲ್ಲಿ ಸಿಖ್ ಪೇಟಾ ಧರಿಸಲಿರುವ ಸಿಂಗ್

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಸಿಖ್ ಪೇಟ ಧರಿಸಿ ಮೆರವಣಿಗೆಯ ತಾಲೀಮಿನಲ್ಲಿ ಭಾಗವಹಿಸಿದ್ದ ಚರಣಪ್ರೀತ್
ಸಿಖ್ ಪೇಟ ಧರಿಸಿ ಮೆರವಣಿಗೆಯ ತಾಲೀಮಿನಲ್ಲಿ ಭಾಗವಹಿಸಿದ್ದ ಚರಣಪ್ರೀತ್   

ಲಂಡನ್: ಬ್ರಿಟಿಷ್ ರಾಜಮನೆತನ ಆಚರಿಸುವ ವಾರ್ಷಿಕ ಮೆರವಣಿಗೆಯಲ್ಲಿ ಸಿಖ್‌ ಸೈನಿಕ ಚರಣಪ್ರೀತ್ ಸಿಂಗ್ ಲಾಲ್ (22) ತಮ್ಮ ಪಾರಂಪರಿಕ ಸಿಖ್ ಪೇಟಾವನ್ನೇ ಧರಿಸಿ ಭಾಗವಹಿಸಲಿದ್ದಾರೆ. ಈ ಮೆರವಣಿಗೆಯಲ್ಲಿ ಬ್ರಿಟಿಷ್‌ ಶೈಲಿಯ ಕರಡಿ ಕೂದಲಿನ ದೊಡ್ಡ ಟೋಪಿಯನ್ನು ಸೈನಿಕರು ಧರಿಸುವುದು ವಾಡಿಕೆ.

ಒಂದು ಸಾವಿರ ಬ್ರಿಟಿಷ್ ಸೈನಿಕರ ರೀತಿಯಲ್ಲಿಯೇ ಕಪ್ಪುಬಣ್ಣದ ಪೇಟಾವನ್ನು ಧರಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ಇವರ ಪೋಷಕರು ಹಾಗೂ ಸಹೋದರಿ ಭಾಗಿಯಾಗಲಿದ್ದಾರೆ.

‘ಬ್ರಿಟಿಷ್‌ ಶೈಲಿಯ ಟೋಪಿ ಬದಲಿಗೆ, ಸಿಖ್‌ ಪೇಟಾವನ್ನು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದು ಖುಷಿಯ ಸಂಗತಿ. ಬ್ರಿಟಿಷ್ ಬೆಂಗಾವಲು ಪಡೆಯ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ ಚರಣಪ್ರೀತ್ ಸಿಂಗ್ ಲಾಲ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.