ವಿಶ್ವಸಂಸ್ಥೆ, (ಪಿಟಿಐ): ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಹಂಗಾಮಿ ಸದಸ್ಯತವನ್ನು ಸೋಮವಾರ ಪಡೆದುಕೊಂಡಿತು. 15 ರಾಷ್ಟ್ರಗಳ ಸದಸ್ಯತ್ವವಿರುವ ಈ ಮಂಡಲಿಯಲ್ಲಿ ಭಾರತವು ಕಳೆದ ಜನವರಿಯಿಂದ ಹಂಗಾಮಿ ಸದಸ್ಯ ರಾಷ್ಟ್ರವಾಗಿದೆ.
ಈ ಸದಸ್ಯತ್ವದ ಅವಧಿ ಎರಡು ವರ್ಷಗಳು. ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ನಡೆದ ಪೈಪೋಟಿಯಲ್ಲಿ ಪಾಕಿಸ್ತಾನವು ಕಿರ್ಗಿಸ್ತಾನದ ವಿರುದ್ಧ ಗೆಲುವು ಸಾಧಿಸಿತು. ಪಾಕ್ ಈ ಹಿಂದೆ ಏಳು ಬಾರಿ ಈ ಸದಸ್ಯತ್ವ ಪಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.