ADVERTISEMENT

ಭಾರತದೊಂದಿಗೆ ಚರ್ಚೆ: ಬ್ರಿಟನ್

ಪಿಟಿಐ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಲಂಡನ್: ಸ್ಕಾಟ್ಲೆಂಡ್‌ನ ಜಗ್ತಾರ್ ಸಿಂಗ್ ಜೋಹಲ್ ಅವರನ್ನು ಬಿಗಿ ಭದ್ರತೆಯಲ್ಲಿ ಪಂಜಾಬ್‌ನ ಜೈಲಿನಲ್ಲಿಟ್ಟುವ ಕುರಿತು ಭಾರತದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬ್ರಿಟನ್‌ ಸರ್ಕಾರ ಹೇಳಿದೆ.

ಕೊಲೆ ಮತ್ತು ಕೊಲೆ ಪಿತೂರಿ ಆರೋಪಗಳನ್ನು ಎದುರಿಸುತ್ತಿರುವ ಜಗ್ತಾರ್ (30) ಅವರನ್ನು ಕಳೆದ ನವೆಂಬರ್‌ನಲ್ಲಿ ಬಂಧಿಸಲಾಗಿದ್ದು, ಪಂಜಾಬ್‌ನ ನಭ ಕೇಂದ್ರ ಕಾರಾ
ಗೃಹದಲ್ಲಿ ಇಡಲಾಗಿದೆ.

ಬ್ರಿಟನ್ ಸಂಸತ್ತಿನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಮಂಗಳವಾರ ಜಗ್ತಾರ್ ವಿಚಾರ ಪ್ರಸ್ತಾಪವಾಗಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಚಾರ ಚರ್ಚಿಸಬೇಕು’ ಎಂದು ಒತ್ತಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.