ADVERTISEMENT

ಭಾರಿ ಹಿಮಪಾತ: ನ್ಯೂಯಾರ್ಕ್‌ನಲ್ಲಿ ವಿಮಾನಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 12:35 IST
Last Updated 31 ಡಿಸೆಂಬರ್ 2010, 12:35 IST

ನ್ಯೂಯಾರ್ಕ್ (ಡಿಪಿಎ): ಹಿಮಪಾತದಿಂದಾಗಿ ನ್ಯೂಯಾರ್ಕ್‌ನಲ್ಲಿ ವಿಮಾನಗಳು ತೀವ್ರ ಪರದಾಟಪಟ್ಟಿದ್ದು, 31ಕ್ಕೂ ಅಧಿಕ ಅಂತರರಾಷ್ಟ್ರೀಯ ವಿಮಾನಗಳು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

 ಇಲ್ಲಿನ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ವಿಮಾನಗಳು ಕನಿಷ್ಠ 3 ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಕಾಯಬೇಕಾಯಿತು. ಇಲ್ಲಿನ ಇನ್ನೆರಡು ವಿಮಾನ ನಿಲ್ದಾಣಗಳಲ್ಲೂ ಇದೇ ಸ್ಥಿತಿ ನೆಲೆಸಿತ್ತು. ಹೀಗಾಗಿ ಕ್ರಿಸ್‌ಮಸ್ ರಜಾ ಸಂಭ್ರಮದಲ್ಲಿದ್ದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.

ಬ್ಯಾಂಕಾಕ್‌ನಿಂದ ಬಂದ ಕ್ಯಾಥೆ ಪೆಸಿಫಿಕ್ ವಿಮಾನ ತನ್ನ ಪ್ರಯಾಣಿಕರನ್ನು ಇಳಿಸಬೇಕಾದರೆ 12 ಗಂಟೆ ಕಾಯಬೇಕಾಯಿತು. ಇತರ ಹಲವು ವಿಮಾನಗಳ ಪ್ರಯಾಣಿಕರು ಸಹ ಗಂಟೆಕಟ್ಟಲೆ ಕಾಯಬೇಕಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.