ADVERTISEMENT

ಭಾಷಣ ಸ್ಪರ್ಧೆ: ಭಾರತ ಸಂಜಾತ ವಿದ್ಯಾರ್ಥಿಗೆ ಬಹುಮಾನ

ಪಿಟಿಐ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಭಾಷಣ ಸ್ಪರ್ಧೆ: ಭಾರತ ಸಂಜಾತ ವಿದ್ಯಾರ್ಥಿಗೆ ಬಹುಮಾನ
ಭಾಷಣ ಸ್ಪರ್ಧೆ: ಭಾರತ ಸಂಜಾತ ವಿದ್ಯಾರ್ಥಿಗೆ ಬಹುಮಾನ   

ವಾಷಿಂಗ್ಟನ್‌ : ‘ಅಮೆರಿಕದ ರಾಷ್ಟ್ರೀಯ ಭಾಷಣ ಮತ್ತು ಚರ್ಚಾ ಟೂರ್ನಮೆಂಟ್‌’ನಲ್ಲಿ ಭಾರತ ಸಂಜಾತ ವಿದ್ಯಾರ್ಥಿ ಜೆ.ಜೆ.ಕಪೂರ್‌ ಬಹುಮಾನ ಪಡೆದುಕೊಂಡಿದ್ದಾನೆ.

ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ವ್ಯಕ್ತಿಯಾಗಿ ತಾನು ಅನುಭವಿಸಿದ ಅಭದ್ರತೆಯ ಭಾವನೆಯನ್ನು ಕಪೂರ್‌ ಭಾಷಣದಲ್ಲಿ ತೆರೆದಿಟ್ಟಿದ್ದ.

ವೆಸ್ಟ್‌ ಡೆಸ್‌ ಮೋನಿಸ್‌ನ ವ್ಯಾಲಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಕಪೂರ್,  9/11ರ ದಾಳಿಯ ನಂತರ ಅಮೆರಿಕದಲ್ಲಿ ಸಿಖ್‌ ಮತ್ತು ಮುಸ್ಲಿಂ ಸಮುದಾಯದ ಅಸ್ತಿತ್ವ ಕುರಿತು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದ.

ADVERTISEMENT

‘ಈ ದಾಳಿ ನಡೆದಾಗ ನಾನು ಎರಡು ವರ್ಷದವನಾಗಿದ್ದೆ. ಆಗ ನನ್ನ ಕುಟುಂಬದ ಸದಸ್ಯರು ಟಿ.ವಿ ನೋಡುತ್ತಿದ್ದರು. ಟಿ.ವಿ.ಯಲ್ಲಿ  ನನ್ನ ತಂದೆ ಕಾಣಿಸಿದರು ಎಂದು ನನ್ನ ಕುಟುಂಬದವರಿಗೆ ಹೇಳಿದೆ. ಆದರೆ ಅದು ನಿಜವಾಗಿ ಒಸಾಮ ಬಿನ್‌ ಲಾಡೆನ್‌ನದ್ದಾಗಿತ್ತು.

ನನ್ನ ತಂದೆಯ ಗಡ್ಡ ಮತ್ತು ರುಮಾಲು ನೋಡಿ ಅಮೆರಿಕದವರು ಉಗ್ರ ಎಂದುಕೊಂಡುಬಿಡುತ್ತಾರೆ ಎಂಬ ಕಾರಣಕ್ಕೆ ನನ್ನ ಕುಟುಂಬದವರು   ಭೀತರಾಗಿದ್ದರು’ ಎಂದು ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.