ADVERTISEMENT

ಭಾಷೆ ಕಲಿಯುವವರ ಬುದ್ಧಿಚುರುಕು..!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಸ್ಟಾಕ್‌ಹೋಮ್ (ಐಎಎನ್‌ಎಸ್): ನೀವು ಹೊಸ ಹೊಸ ಭಾಷೆ ಕಲಿಯುವುದರಲ್ಲಿ ಆಸಕ್ತಿ ವಹಿಸುತ್ತಿದ್ದೀರಾ ? ಹೊಸ ಭಾಷೆಗಳನ್ನು ಕಲಿಯುತ್ತಿದ್ದೀರಾ? ಹೌದಾದರೆ, ನಿಮ್ಮ ಮಿದುಳು ಚುರುಕಾಗುತ್ತದೆ. ಬೆಳವಣಿಗೆ ವಿಷಯದಲ್ಲೂ ಒಂದು ಹೆಜ್ಜೆ ಮುಂದೆ ಇರುತ್ತದೆ. ನೀವು ಬುದ್ಧಿವಂತರಾಗುತ್ತಿದ್ದೀರಾ...!

ಹೀಗೆಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ. `ಕಡಿಮೆ ಅವಧಿಯಲ್ಲಿ ಹೊಸ ಭಾಷೆಗಳನ್ನು ಕಲಿತವರ ಬಗ್ಗೆ~  ಸಂಶೋಧಕರ ತಂಡ ಅಧ್ಯಯನ ನಡೆಸಿದಾಗ ಈ ಫಲಿತಾಂಶ ಹೊರ ಬಿದ್ದಿದೆ.
ಸ್ವೀಡನ್‌ನ ಲುಂಡ್ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಸಂಶೋಧಕರ ತಂಡವೊಂದು `ತ್ವರಿತಗತಿಯಲ್ಲಿ ಹೊಸ ಭಾಷೆ  ಕಲಿಯುವವರ ಮಿದುಳು ಯಾವ ರೀತಿ ಬೆಳವಣಿಗೆಯಾಗುತ್ತದೆ~ ಎಂಬುದರ ಕುರಿತು ಅಧ್ಯಯನ ನಡೆಸಿದೆ. 

ಭಾಷೆ ಕಲಿಕೆ ಮತ್ತು ಮಿದುಳು ಬೆಳವಣಿಗೆಯ ಸಂಶೋಧನೆ ನಡೆಸುತ್ತಿರುವ ತಂಡ ಕೆಲ ವೈದ್ಯಕೀಯ ವಿದ್ಯಾರ್ಥಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ. ಇದರಲ್ಲಿ ಕಠಿಣವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ತ್ವರಿತವಾಗಿ ಭಾಷೆ ಕಲಿಯುವ ವಿದ್ಯಾರ್ಥಿಗಳೂ ಇದ್ದಾರೆ. ಈ ಎರಡೂ ವಿಧದ ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸ ಮಾಡುವ ಮೂರು ತಿಂಗಳಿಗೆ ಮುನ್ನ ಹಾಗೂ ನಂತರ       ಎಂಆರ್‌ಐ ಸ್ಕಾನ್‌ಗೆ ಒಳಪಡಿಸಲಾಗಿದೆ.

ಹೊಸ ಭಾಷೆಯನ್ನು ಕಲಿಯದ ವಿದ್ಯಾರ್ಥಿಗಳ ಮಿದುಳು ತಟಸ್ಥವಾಗಿದ್ದರೆ, ತ್ವರಿತವಾಗಿ ಹೊಸ ಭಾಷೆಗಳನ್ನು ಕಲಿಯುವ ವಿದ್ಯಾರ್ಥಿಗಳ ಮಿದುಳಿನ ಕೆಲವು ಭಾಗದಲ್ಲಿ ಬೆಳವಣಿಗೆಯಾಗಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ.  ಇಂಥ ವಿದ್ಯಾರ್ಥಿಗಳ ಮಿದುಳಿನ ಹಿಪ್ಪೊಕ್ಯಾಂಪಸ್ ಗಾತ್ರ ದೊಡ್ಡದಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.