ADVERTISEMENT

ಮಕ್ಕಳಲ್ಲಿ ಬುದ್ಧಿಮತ್ತೆ ಹೆಚ್ಚಿಸುವ ಸ್ತನ್ಯಪಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ನ್ಯೂಯಾರ್ಕ್‌ (ಐಎಎನ್‌ಎಸ್‌): ತಾಯಿ ಎದೆ ಹಾಲು ಕುಡಿದು ಬೆಳೆದ ಮಕ್ಕಳು ಬುದ್ಧಿಮತ್ತೆಯಲ್ಲಿ ಮುಂದೆ ಇರುತ್ತಾರೆ ಎಂಬ ಅಂಶವು  ಅಧ್ಯಯನದಿಂದ ತಿಳಿದು ಬಂದಿದೆ. ಈ ಕುರಿತು ಅಧ್ಯಯನ ನಡೆಸಿರುವ ಬ್ರಿಗ್‌­ಹ್ಯಾಮ್‌ ಯಂಗ್‌ ವಿಶ್ವವಿದ್ಯಾಲ­ಯದ ಸಂಶೋಧಕ ಬೆನ್‌ ಗಿಬ್ಸ್‌ ಅವರು 7,500 ತಾಯಂದಿರು ಮತ್ತು 5 ವರ್ಷದವೆರೆಗಿನ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ್ದರು.

ತಾಯಿಯ ಎದೆ ಹಾಲು ಕುಡಿದ ಮಕ್ಕಳು ಒಂದು ವರ್ಷ ಹನ್ನೊಂದು ತಿಂಗಳಿನಲ್ಲಿಯೇ ಓದುವ ಸಾಮರ್ಥ್ಯ ಹಾಗೂ ಭಾವನಾತ್ಮಕ ಸಂವೇದನೆಯನ್ನು ಪಡೆದುಕೊಳ್ಳುತ್ತಾರೆ ಎಂದು ಅಧ್ಯಯನ ತಿಳಿಸಿದೆ. 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ತಾಯಿಯ ಎದೆಹಾಲು ಕುಡಿದ ಮಕ್ಕಳ ಬುದ್ಧಿಮತ್ತೆ ಚುರುಕಾಗಿ­ರುವ ಅಂಶವನ್ನು  ತಾವೂ ಗುರುತಿಸಿರು­ವುದಾಗಿ ವೈಯ್ನೆ ಸ್ಟೇಟ್‌ ವೈದ್ಯಕೀಯ ವಿಶ್ವವಿದ್ಯಾಲಯದ  ಮಕ್ಕಳ ಅಭಿವೃದ್ಧಿ ವಿಭಾಗದ ತಜ್ಞ ಸಾಂಡ್ರ ಜಾಕೋಬ್ಸನ್‌ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.