ಮಾಸ್ಕೊ (ಪಿಟಿಐ): ಮಗುವಿನ ಅಳುವಿನಿಂದ ನಿದ್ರೆ ಹಾಳಾಗಿದ್ದಕ್ಕೆ ಕೋಪಗೊಂಡ ರೂಪದರ್ಶಿಯೊಬ್ಬರು ತಮ್ಮ ನಾಲ್ಕು ತಿಂಗಳ ಗಂಡು ಮಗುವನ್ನು ಹದಿನಾಲ್ಕನೇ ಅಂತಸ್ತಿನ ಕಟ್ಟಡದಿಂದ ಹೊರಗೆ ಎಸೆದ ಆಘಾತಕಾರಿ ಘಟನೆ ರಷ್ಯಾದ ನಿಝನಿ ನೊವಗೋರೋಡ್ ನಗರದಲ್ಲಿ ನಡೆದಿದೆ.
27 ವರ್ಷದ ಯಕಾಟೆರಿನಾ ಮಾರ್ಕೊಕಿನಾ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ. ಮಗುವಿನ ಮೃತದೇಹ ಬಿದ್ದಿರುವುದನ್ನು ಶುಕ್ರವಾರ ಬೆಳಿಗ್ಗೆ ಮಕ್ಕಳು ನೋಡಿ ಇತರರಿಗೆ ವಿಷಯ ತಿಳಿಸಿದ್ದಾರೆ. ತನಿಖೆಗಾಗಿ ಯಕಾಟೆರಿನಾರನ್ನು ಮಾನಸಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.