ADVERTISEMENT

ಮಣ್ಣು ಕುಸಿತ: ಚೀನಾದಲ್ಲಿ 6 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2014, 12:15 IST
Last Updated 9 ಜುಲೈ 2014, 12:15 IST

ಬೀಜಿಂಗ್‌ (ಪಿಟಿಐ): ಭಾರಿ ಮಳೆಯ ಬಳಿಕ ನೈರುತ್ಯ ಚೀನಾದ ಎರಡು ಗ್ರಾಮಗಳಲ್ಲಿ ಸಂಭವಿಸಿದ ಮಣ್ಣು ಕುಸಿದ ಘಟನೆಯಲ್ಲಿ ಬುಧವಾರ ಆರು ಜನರು ಮೃತಪಟ್ಟು, 25 ಮಂದಿ ಕಾಣೆಯಾಗಿದ್ದಾರೆ.

ಯುನ್ನಾನ್ ಪ್ರಾಂತ್ಯದ ಫುಂಗೊಂಗ್ ಪ್ರದೇಶದಲ್ಲಿನ ಸಿಲಿಕಾನ್ ಗಣಿಯಲ್ಲಿ ಮಣ್ಣುಕುಸಿದ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡು, 17 ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಭೂಮಿ ಅಗೆಯುವ ಯಂತ್ರಗಳು, ಅಗ್ನಿ ಶಾಮಕ ವಾಹನಗಳು ಹಾಗೂ ಆಂಬುಲೆನ್ಸ್‌ಗಳು ಸೇರಿದಂತೆ 140  ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನುಜಾಂಗ್ ನದಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ADVERTISEMENT

ಕಾಣೆಯಾದವರಲ್ಲಿ ಕೆಲವರು ನದಿಗೆ ಜಾರಿರಬಹುದು. ಉಳಿದವರು ದಟ್ಟ ಮಣ್ಣು ಹಾಗೂ ಕಲ್ಲುಗಳ ಅವಶೇಷದಡಿ ಸಿಲುಕಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಶಂಕಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ  ಯುನ್ಲೊಂಗ್ ಪ್ರದೇಶದಲ್ಲಿ ಮನೆಗಳು ಕುಸಿದಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಎಂಟು ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.