ADVERTISEMENT

ಮಾರಾಟಕ್ಕೆ ಮುಕ್ತ ಸ್ಲೊವೇನಿಯಾ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST
ಮಾರಾಟಕ್ಕೆ ಮುಕ್ತ ಸ್ಲೊವೇನಿಯಾ!
ಮಾರಾಟಕ್ಕೆ ಮುಕ್ತ ಸ್ಲೊವೇನಿಯಾ!   

ಲಜುಬಲ್ಜಾನ್ (ಸ್ಲೊವೇನಿಯಾ): ವಿಶ್ವದಾದ್ಯಂತ 2008ರಲ್ಲಿ ಉಂಟಾದ ಆರ್ಥಿಕ ಹಿಂಜರಿತದಿಂದ ಸೊರಗಿರುವ ಯೂರೋಪ್ ಖಂಡದ ಪೂರ್ವ ಭಾಗದಲ್ಲಿರುವ ಸ್ಲೊವೇನಿಯಾ ದೇಶ ಮಾರಾಟಕ್ಕೆ ಸಿದ್ಧವಿದೆ.

ಈ ಪುಟ್ಟ ರಾಷ್ಟ್ರದ ಪಾರಂಪರಿಕ ಭವ್ಯ ಬಂಗಲೆಗಳಿಂದ ಹಿಡಿದು ವಿಮಾನ ನಿಲ್ದಾಣದ ವರೆಗಿನ ಎಲ್ಲಾ ಸ್ಥಳಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಇದನ್ನು ಕೊಳ್ಳಲು ಭಾರತೀಯರು ಮುಂದಾಗುವರೆ ಎಂಬ ನಿರೀಕ್ಷೆಯನ್ನು ಸ್ಲೊವೇನಿಯಾ ಹೊಂದಿದೆ.

ಸ್ಲೊವೇನಿಯಾದಲ್ಲಿ ವ್ಯಾಪಾರ- ವಹಿವಾಟು ಕೈಗೊಳ್ಳಲು ಮತ್ತು ಬಂಡವಾಳ ಹೂಡಲು ಬಯಸುವ ಭಾರತೀಯ ಉದ್ಯಮಿಗಳನ್ನು ಆಕರ್ಷಿಸಲು ಮುಂದಿನವಾರ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಸ್ಲೊವೇನಿಯಾದ ಪ್ರಧಾನಿ ಬೊರುತ್ ಪಹೋರ್ ಅವರು ವಾಣಿಜ್ಯೋದ್ಯಮಿಗಳ ದೊಡ್ಡ ನಿಯೋಗವನ್ನೇ ಕರೆತರಲಿದ್ದಾರೆ.

ಜೊತೆಗೆ ಎರಡು ದೇಶಗಳ ನಡುವೆ ವಾಣಿಜ್ಯೋದ್ಯಮವನ್ನು ವಿಸ್ತರಿಸುವ ಬಗ್ಗೆಯೂ ಅವರು ಮಾತುಕತೆ ನಡೆಸಲಿದ್ದಾರೆ.`ನಮ್ಮ ಉದ್ದೇಶ ಭಾರತೀಯ ಉದ್ಯಮಿಗಳನ್ನು ಆಕರ್ಷಿಸುವುದೇ ಆಗಿದೆ~ ಎಂದು ಬೊರುತ್ ಅವರು ಕಳೆದ ವಾರ ಸ್ಲೊವೇನಿಯಾಕ್ಕೆ ಭೇಟಿ ನೀಡಿದ ಭಾರತದ ಪತ್ರಕರ್ತರಿಗೆ  ತಿಳಿಸಿದ್ದಾರೆ.

`ಆಮದು ಮತ್ತು ರಫ್ತು ವಿಚಾರದಲ್ಲಿ ಹೊಸದೊಂದು ಶಕೆಯನ್ನೇ ಆರಂಭಿಸಲು ನಾವು ಹೊರಟಿದ್ದೇವೆ. ನಮ್ಮ ಗುರಿ ಭಾರತದಿಂದ ಬಂಡವಾಳ ಆಕರ್ಷಣೆ ಮಾಡುವುದೇ ಆಗಿದೆ~ ಎಂದು ಸ್ಲೊವೇನಿಯಾದ ಹಣಕಾಸು ಸಚಿವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.