ADVERTISEMENT

ಮುಷ್ಕರ: 800 ವಿಮಾನಗಳ ಹಾರಾಟ ರದ್ದು

ಏಜೆನ್ಸೀಸ್
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ಫ್ರ್ಯಾಂಕ್‌ಫರ್ಟ್‌ ಅಮ್‌ ಮೇನ್‌, ಜರ್ಮನಿ (ಎಎಫ್‌ಪಿ): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಬ್ಬಂದಿ ಮುಷ್ಕರ ನಡೆಸಲಿರುವ ಕಾರಣ ಮಂಗಳವಾರ 800ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗುವುದು ಎಂದು ಜರ್ಮನಿಯ ವಿಮಾನಯಾನ ಸಂಸ್ಥೆ ‘ಲುಫ್ತಾನ್ಸಾ’ ತಿಳಿಸಿದೆ.

‘1600 ವಿಮಾನಗಳ ಪೈಕಿ 800 ವಿಮಾನಗಳ ಹಾರಾಟ ರದ್ದುಪಡಿಸಲಾಗುವುದು. ಇದರಿಂದಾಗಿ 90 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೆ ಸಿಲುಕಲಿದ್ದಾರೆ. ಬುಧವಾರದಿಂದ ಎಂದಿನಂತೆ ವಿಮಾನಗಳ ಸೇವೆ ಮುಂದುವರಿಯಲಿದೆ’ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT