ADVERTISEMENT

ಮ್ಯಾನ್ಮಾರ್‌ನಲ್ಲಿ ಭೂಕಂಪ: 12 ಸಾವು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ಯಾಂಗೂನ್ (ಎಪಿ/ಪಿಟಿಐ): ಉತ್ತರ ಮ್ಯಾನ್ಮಾರ್‌ನಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದ್ದು, 12 ಜನರು ಮೃತಪಟ್ಟಿದ್ದಾರೆ.

ಭೂಕಂಪನದ ತೀವ್ರತೆಯು  6.8ರಷ್ಟಿದ್ದು, ಸ್ಥಳೀಯ ಕಾಲಮಾನ ಬೆಳಿಗ್ಗೆ 7.42ರ ವೇಳೆಯಲ್ಲಿ    ಸಂಭವಿಸಿದೆ

ಪ್ರಮುಖ ಗಣಿಗಾರಿಕೆ ಪ್ರದೇಶವಾದ ಮಾಕೊದಲ್ಲೂ ಭೂಕಂಪದ ಪರಿಣಾಮ ಬೀರಿದ್ದು, ದೇವಾಲಯಗಳು ನಾಶವಾಗಿವೆ.

ನೆಪೆತಾವ್‌ನಲ್ಲಿರುವ ಪಾರ್ಲಿಮೆಂಟ್ ಕಟ್ಟದ ಕಿಟಕಿಗಳು ಬಿರುಕು ಬಿಟ್ಟಿವೆ.

ಬ್ಯಾಂಕಾಕ್/ಇಂಫಾಲ ವರದಿ: ಭೂಕಂಪವು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ಗೂ ಪಸರಿಸಿದ್ದು, ಇಲ್ಲಿಯೂ ಭೂಮಿ ಕಂಪಿಸಿದೆ. ಜನರು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. 

 ಮಣಿಪುರದ ರಾಜಧಾನಿ ಇಂಫಾಲದಲ್ಲೂ ಬೆಳಿಗ್ಗೆ 6.44ರ ಸಮಯದಲ್ಲಿ ಅರ್ಧ ನಿಮಿಷ ಭೂಮಿ ಕಂಪಿಸಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ

ಅಮೆರಿಕದಲ್ಲೂ ಭೂಕಂಪ
ಲ್ಯೂಯಿಸ್‌ವೆಲ್ಲೆ/ಅಮೆರಿಕ(ಎಪಿ):ಅಮೆರಿಕದ ಎಂಟು ರಾಜ್ಯಗಳಲ್ಲಿ ಶನಿವಾರ ಭೂಕಂಪನದ ಅನುಭವವಾಗಿದ್ದು ಜನರನ್ನು ಗಾಬರಿಗೊಳಿಸಿದೆ. ಕಂಪನದ ತೀವ್ರತೆಯು 4.3ರಷ್ಟು ದಾಖಲಾಗಿತ್ತು.  ಇದರ ಕೇಂದ್ರ ಕೆಂಟಕಿಯಲ್ಲಿತ್ತು ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT