ADVERTISEMENT

ಯುಎನ್‌ಎಚ್‌ಆರ್‌ಸಿ: ಬದಲಾದ ಭಾರತದ ನಿಲುವು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:35 IST
Last Updated 20 ಮಾರ್ಚ್ 2012, 19:35 IST

ಕೊಲಂಬೊ (ಪಿಟಿಐ): ಪ್ರಸ್ತುತ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ (ಯುಎನ್‌ಎಚ್‌ಆರ್‌ಸಿ) ಶ್ರೀಲಂಕಾ ವಿರುದ್ಧ ಅಮೆರಿಕ ಮಂಡಿಸಿರುವ ನಿರ್ಣಯದ ಪರವಾಗಿ ಮತ ಚಲಾಯಿಸುವ ಇಂಗಿತ ವ್ಯಕ್ತಪಡಿಸುವ ಮೂಲಕ ಭಾರತವು ಲಂಕಾಗೆ ತೀವ್ರ ಆಘಾತ ನೀಡಿದೆ ಎಂದು ಇಲ್ಲಿನ ಮಾಧ್ಯಮವೊಂದು ಹೇಳಿದೆ.

`ಯುಎನ್‌ಎಚ್‌ಆರ್‌ಸಿ ಯಲ್ಲಿ ಯಾವುದೇ ದೇಶದ ನಿರ್ದಿಷ್ಟ ನಿರ್ಣಯವನ್ನು ವಿರೋಧಿಸುವುದಾಗಿ ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಈ ವಿಷಯದಲ್ಲಿ ಭಾರತವು ಸಾರ್ವತ್ರಿಕ ನಿಲುವು ತಳೆಯುವುದೆಂದು ನಾವು ಭಾವಿಸಿದ್ದೆವು~ ಎಂದು ದಿನಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ದ್ವಿಮುಖ ನೀತಿಯನ್ನು ಭಾರತ ಅನುಮೋದಿಸಿದೆ ಎಂದು ಟೀಕಿಸಿರುವ ಪತ್ರಿಕೆಯು, ಇದರಿಂದ ಅಮೆರಿಕದ ನಿರ್ಣಯವನ್ನು ವಿಫಲಗೊಳಿಸುವ ಲಂಕಾ ಪ್ರಯತ್ನಕ್ಕೆ ಅಡ್ಡಿಯಾಗಿದೆ ಎಂದು ಹೇಳಿದೆ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT