ADVERTISEMENT

ರಾಖೈನ್‌ನಲ್ಲಿ ಶಾಲೆ ಪುನರಾರಂಭ

ಏಜೆನ್ಸೀಸ್
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ರಾಖೈನ್‌ನಲ್ಲಿ ಶಾಲೆ ಪುನರಾರಂಭ
ರಾಖೈನ್‌ನಲ್ಲಿ ಶಾಲೆ ಪುನರಾರಂಭ   

ಯಾಂಗೂನ್‌: ಮ್ಯಾನ್ಮಾರ್‌ನ ರಾಖೈನ್‌ ರಾಜ್ಯದಲ್ಲಿ ಸರ್ಕಾರ ಮಕ್ಕಳಿಗಾಗಿ ಶಾಲೆಗಳನ್ನು ಪುನರಾರಂಭಿಸಿದೆ. ಇತ್ತೀಚೆಗೆ ನಡೆದ ಕೋಮು ಸಂಘರ್ಷದಿಂದ ಈ ರಾಜ್ಯ ಭಾರಿ ಪ್ರಮಾಣದಲ್ಲಿ ನಲುಗಿತ್ತು.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಸ್ಥಿರತೆ ಮೂಡಿದೆ ಎಂದು ಸರ್ಕಾರಿ ಮಾಧ್ಯಮಗಳು ಹೇಳುತ್ತಿದ್ದರೂ ಸಾವಿರಾರು ರೋಹಿಂಗ್ಯಾ ಮುಸ್ಲಿಮರು ಮಾತ್ರ ಇಲ್ಲಿಂದ ಪಲಾಯನ ಮಾಡಿ ನೆರೆಯ ದೇಶಗಳತ್ತ ಸಾಗುತ್ತಿದ್ದಾರೆ.

ಸಂಘರ್ಷದಿಂದ ರಾಖೈನ್‌ ರಾಜ್ಯ ಛಿದ್ರವಾಗಿತ್ತು. ರೋಹಿಂಗ್ಯಾ ಉಗ್ರರು ಮತ್ತು ಸೇನೆಯ ನಡುವಿನ ಹೋರಾಟದಲ್ಲಿ ಸಾವಿರಾರು ರೋಹಿಂಗ್ಯಾ ಮುಸ್ಲಿಮರು ತೊಂದರೆಗೊಳಗಾಗಿದ್ದರು.ರಾಜ್ಯದ 10 ಲಕ್ಷ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ.

ADVERTISEMENT

ಆನಂತರ ಇದು ವಿಶ್ವದ ಬಹುದೊಡ್ಡ ವಲಸೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ರೋಹಿಂಗ್ಯಾ ಜನರ ಗ್ರಾಮಗಳನ್ನು ಸೇನೆ ಮತ್ತು ಉದ್ರಿಕ್ತರ ಗುಂಪುಗಳು ಸುಟ್ಟು ಹಾಕಿವೆ. ಹಿಂಸಾಚಾರದಿಂದ 30 ಸಾವಿರ ಜನ ನಿರ್ವಸತಿಗರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.