ADVERTISEMENT

‘ಶವ ಶೆರಿನ್‌ದ್ದೇ’: ಪೊಲೀಸರ ಸ್ಪಷ್ಟನೆ

ಪಿಟಿಐ
Published 24 ಅಕ್ಟೋಬರ್ 2017, 19:28 IST
Last Updated 24 ಅಕ್ಟೋಬರ್ 2017, 19:28 IST

ಹ್ಯೂಸ್ಟನ್‌: ‘ರಸ್ತೆ ಪಕ್ಕದ ಸುರಂಗದಲ್ಲಿ ಪತ್ತೆಯಾದ ಮಗುವಿನ ಶವ ಭಾರತ ಮೂಲದ ಬಾಲಕಿ  ಶೆರಿನ್‌ ಮ್ಯಾಥ್ಯೂಸ್‌ದ್ದೇ ಎಂದು ದೃಢಪಟ್ಟಿದೆ’ ಎಂದು ರಿಚರ್ಡ್‌ಸನ್‌ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸೋಮವಾರವಷ್ಟೇ ಬಾಲಕಿಯ ಮೃತದೇಹ ಮನೆ ಸಮೀಪದಲ್ಲಿ ಪತ್ತೆಯಾಗಿತ್ತು.

ಶೆರಿನ್‌ ಸಾವಿಗೆ ಸಂಬಂಧಿಸಿದಂತೆ ಸಾಕುತಂದೆ ವೆಸ್ಲೆ ಮ್ಯಾಥ್ಯೂಸ್‌ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಬಂಧನದ ಪ್ರಮಾಣಪತ್ರದಲ್ಲಿ ಆರೋಪಿ ನೀಡಿದ ಹೇಳಿಕೆ ಪ್ರಕಾರ, ‘ಮಗಳು ಹಾಲು ಕುಡಿಯುವ ವೇಳೆ ಉಸಿರುಗಟ್ಟಿತ್ತು. ಈ ವೇಳೆ ಮಗಳು ಸಾವನ್ನಪ್ಪಿರಬೇಕು ಎಂದು ಭಾವಿಸಿ, ಶವವನ್ನು ಹೊರಕ್ಕೆ ಹಾಕಿದ್ದೆನು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT