ADVERTISEMENT

ಶಿಕ್ಷಣತಜ್ಞ ಪ್ರಜಾಪತಿ ಎನ್‌ಎಪಿಎ ಫೆಲೊ ಆಗಿ ಆಯ್ಕೆ

ಪಿಟಿಐ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST

ವಾಷಿಂಗ್ಟನ್‌: ಭಾರತದ ಶಿಕ್ಷಣತಜ್ಞ ಪ್ರಜಾಪತಿ ತ್ರಿವೇದಿ (64) ಅವರು ಅಮೆರಿಕದ ಪ್ರತಿಷ್ಠಿತ ನ್ಯಾಷನಲ್‌ ಅಕಾಡೆಮಿ ಆಫ್‌ ಪಬ್ಲಿಕ್‌ ಆಡ್ಮಿನಿಸ್ಟ್ರೇಷನ್‌ ಫೆಲೊ ಆಗಿ ಆಯ್ಕೆಯಯಾಗಿದ್ದು, ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯರಾಗಿದ್ದಾರೆ.

ತ್ರಿವೇದಿ ಅವರು ಪ್ರಸ್ತುತ ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನಲ್ಲಿ ಹಿರಿಯ ಫೆಲೊ ಮತ್ತು ಸಾರ್ವಜನಿಕ ನೀತಿ ವಿಷಯದ ಪ್ರಾಧ್ಯಾಪಕರಾಗಿದ್ದಾರೆ.

ಎನ್‌ಎಪಿಎ ಸ್ವತಂತ್ರ, ಲಾಭರಹಿತ ಮತ್ತು ಪಕ್ಷಪಾತರಹಿತ ಸಂಸ್ಥೆಯಾಗಿದೆ. ಪರಿಣಾಮಕಾರಿ, ಸಮರ್ಥ, ಜವಾಬ್ದಾರಿಯುತ ಮತ್ತು ಪಾರದರ್ಶಕ ಸಂಸ್ಥೆಗಳನ್ನು ಕಟ್ಟಲು ಸರ್ಕಾರದ ಮುಖಂಡರಿಗೆ ನೆರವು ನೀಡುವ ಉದ್ದೇಶದಿಂದ ಅಮೆರಿಕ ಕಾಂಗ್ರೆಸ್‌ 1967ರಲ್ಲಿ ಈ ಸಂಸ್ಥೆಯನ್ನು ಆರಂಭಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.