ADVERTISEMENT

ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಪಿಪಿಪಿಗೆ ಮತ್ತೆ ಜರ್ದಾರಿ ಅಧ್ಯಕ್ಷ?
ಇಸ್ಲಾಮಾಬಾದ್ (ಐಎಎನ್‌ಎಸ್):
ಪಾಕಿಸ್ತಾನದ ನಿರ್ಗಮನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಮತ್ತೆ `ಪಾಕಿಸ್ತಾನ ಪೀಪಲ್ಸ್ ಪಾರ್ಟಿ' (ಪಿಪಿಪಿ)ಯ ನಾಯಕತ್ವ ವಹಿಸಿಕೊಳ್ಳಲು ಸಿದ್ಧತೆ ಮಾಡಿರುವುದಾಗಿ ಶನಿವಾರ `ಡಾನ್' ವರದಿ ಮಾಡಿದೆ.

ಮೊರ್ಸಿ ವಿರುದ್ಧ ಹೊಸ ಆರೋಪ
ಕೈರೊ (ಪಿಟಿಐ):
ಪದಚ್ಯುತ ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ವಿರುದ್ಧ `ನ್ಯಾಯಾಧೀಶರಿಗೆ ಅವಮಾನ' ಮಾಡಿದ ಹೊಸ ಆರೋಪ ಹೊರಿಸಲಾಗಿದೆ. ಇದರಿಂದ ತನಿಖೆಗಾಗಿ ಮೊರ್ಸಿ ಬಂಧನವನ್ನು ನಾಲ್ಕು ದಿನ ಮತ್ತೆ ವಿಸ್ತರಿಸಲಾಗಿದೆ.

`2005ರಲ್ಲಿ ನಡೆದಿರುವ ಸಂಸದೀಯ ಚುನಾವಣೆಯಲ್ಲಿ 22 ನ್ಯಾಯಾಧೀಶರು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸುವ ಮೂಲಕ ಮೊರ್ಸಿ ನ್ಯಾಯಾಂಗಕ್ಕೆ ಅವಮಾನ ಮಾಡಿದ್ದಾರೆ' ಎಂದು  ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಬ್ರಿಟನ್ ವಲಸೆ ನೀತಿ ಸಡಿಲ
ಲಂಡನ್ (ಪಿಟಿಐ):
ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ತಾನು ರೂಪಿಸಿದ್ದ ವಲಸೆ ನಿಯಾಮವಳಿಗಳಲ್ಲಿ ಬ್ರಿಟನ್ ಸಡಿಲತೆ ತಂದಿದ್ದು, ಇದು ಭಾರತೀಯರಿಗೆ ನೆರವಾಗವಾಗಿದೆ.

ಹೊಸ ನಿಯಾಮಾವಳಿ ಪ್ರಕಾರ, ಬ್ರಿಟನ್‌ಗೆ ವಿದ್ಯಾಭ್ಯಾಸ ಅಥವಾ ಉದ್ಯೋಗ ತರಬೇತಿಗಾಗಿ ಹೋಗುವವರು ಅಲ್ಪ ಕಾಲ ಅಲ್ಲೇ ನೆಲೆಸಲು ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.