ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು 4 ಮಂದಿಯ ತಂಡವೊಂದನ್ನು ಅಟ್ಲಾಂಟಿಕ್ ಮಹಾಸಾಗರಕ್ಕೆ ಕಳುಹಿಸಲು ನಿರ್ಧರಿಸಿದೆ. ಈ ತಂಡವು 10 ದಿನಗಳ ಕಾಲ ಅಲ್ಲಿಯೇ ಇರಲಿದ್ದು, ಮಂಗಳಗ್ರಹದಲ್ಲಿರುವ ವಾತಾವರಣದಲ್ಲಿರುವ ಸಮಾನ ಅಂಶಗಳನ್ನು ಸಾಗರದ ತಳದಲ್ಲಿ ಪರಿಶೋಧನೆಗೆ ಒಳಪಡಿಸಲಿದೆ.
ಸಮುದ್ರದ ಕೆಳಭಾಗದಲ್ಲಿ ಕೆಲಸ ಮಾಡುವುದರಿಂದ ಮಾನವರು ಬಾಹ್ಯಾಕಾಶದಲ್ಲಿ ಅನುಭವಿಸುವ ಸೂಕ್ಷ್ಮ-ಗುರುತ್ವಾಕರ್ಷಣೆಯ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ ಎಂದು ಫ್ಲಾರಿಡಾದ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.
ಸಾಗರ ತಳದಲ್ಲಿರುವ ಸಂಶೋಧನಾ ಕೇಂದ್ರದಲ್ಲಿನ ವಾತಾವರಣವು, ಬಾಹ್ಯಾಕಾಶದಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುತ್ತದೆ. ಹೀಗಾಗಿ ಈ ಕೇಂದ್ರದಲ್ಲಿ ತನ್ನ ಕೆಲವು ಉಪಕರಣಗಳು, ಸಂಶೋಧನೆಗಳನ್ನು ಪ್ರಯೋಗಕ್ಕೆ ಗುರಿಪಡಿಸಲು ನಾಸಾ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.