ADVERTISEMENT

ಸಿರಿಯಾ ಮೇಲಿನ ದಾಳಿಯ ಪರಿಣಾಮ ಎದುರಿಸಬೇಕಾಗುತ್ತದೆ : ರಷ್ಯಾ ಎಚ್ಚರಿಕೆ

ಅಮೆರಿಕ, ಫ್ರಾನ್ಸ್‌, ಬ್ರಿಟನ್‌ಗೆ ರಷ್ಯಾ ತಿರುಗೇಟು

ಏಜೆನ್ಸೀಸ್
Published 14 ಏಪ್ರಿಲ್ 2018, 8:53 IST
Last Updated 14 ಏಪ್ರಿಲ್ 2018, 8:53 IST
ಸಾಂದರ್ಭಿಕ ಚಿತ್ರ ... ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌
ಸಾಂದರ್ಭಿಕ ಚಿತ್ರ ... ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌   

ನವದೆಹಲಿ : ಸಿರಿಯಾದಲ್ಲಿ ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ರಷ್ಯಾ ಖಾರವಾಗಿ ಪ್ರತಿಕ್ರಿಯಿಸಿದೆ. ಈ ಕಾರ್ಯಾಚರಣೆಯ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದಲ್ಲಿನ ರಷ್ಯಾ ರಾಯಭಾರಿ ಅನಟೊಲಿ ಅಂತನೊವ್‌ ತಿಳಿಸಿದ್ದಾರೆ.

ಟ್ವಿಟರ್‌ ಮೂಲಕ ಹೇಳಿಕೆ ನೀಡಿರುವ ಅವರು, ‘ಪೂರ್ವಯೋಜಿತ ಸನ್ನಿವೇಶ ಸೃಷ್ಟಿಸುವ ಪ್ರಯತ್ನ ಜಾರಿಯಲ್ಲಿದೆ. ಮತ್ತೆ, ನಮ್ಮನ್ನು ಕೆಣಕಲಾಗುತ್ತಿದೆ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾವು ಈಗಾಗಲೇ ಎಚ್ಚರಿಸಿದ್ದೇವೆ’ ಎಂದಿದ್ದಾರೆ.

‘ಈ ಕಾರ್ಯಾಚರಣೆಯಿಂದ ವಾಷಿಂಗ್ಟನ್, ಲಂಡನ್‌ ಮತ್ತು ಪ್ಯಾರೀಸ್‌ನೊಂದಿಗಿನ ಸಂಬಂಧಗಳು ಹದಗೆಡಲಿವೆ. ರಾಸಾಯನಿಕ ಶಸ್ತ್ರಾಸ್ತ್ರಗಳ ದೊಡ್ಡ ಮಾಲೀಕನಾದ ಅಮೆರಿಕ ಇದಕ್ಕೆ ಬೇರೆ ದೇಶಗಳನ್ನು ದೂಷಿಸುವ ನೈತಿಕತೆ ಹೊಂದಿಲ್ಲ’ ಎಂಬ ಕಟುವಾದ ಸಾಲುಗಳನ್ನು ಅವರು ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.