ADVERTISEMENT

ಸೌಲಿಕ್ ಚಂಡಮಾರುತ: 3 ಲಕ್ಷ ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST
ಚೀನಾದಲ್ಲಿ ಬೀಸುತ್ತಿರುವ `ಸೌಲಿಕ್' ಚಂಡಮಾರುತದಿಂದಾಗಿ ಇಲ್ಲಿನ ವೆಂಜೌ ಸಮುದ್ರ ತೀರದಲ್ಲಿ ಎದ್ದ ಭಾರಿ ಗಾತ್ರದ ಅಲೆಯಿಂದ ಪಾರಾಗಲು ಮುಂದಾದ ವ್ಯಕ್ತಿಗೆ ಸೈನಿಕರೊಬ್ಬರು ನೆರವು ನೀಡಿದರು 	- ರಾಯಿಟರ್ಸ್‌ ಚಿತ್ರ
ಚೀನಾದಲ್ಲಿ ಬೀಸುತ್ತಿರುವ `ಸೌಲಿಕ್' ಚಂಡಮಾರುತದಿಂದಾಗಿ ಇಲ್ಲಿನ ವೆಂಜೌ ಸಮುದ್ರ ತೀರದಲ್ಲಿ ಎದ್ದ ಭಾರಿ ಗಾತ್ರದ ಅಲೆಯಿಂದ ಪಾರಾಗಲು ಮುಂದಾದ ವ್ಯಕ್ತಿಗೆ ಸೈನಿಕರೊಬ್ಬರು ನೆರವು ನೀಡಿದರು - ರಾಯಿಟರ್ಸ್‌ ಚಿತ್ರ   

ಬೀಜಿಂಗ್ (ಐಎಎನ್‌ಎಸ್): ಚೀನಾದಲ್ಲಿ ಬೀಸುತ್ತಿರುವ `ಸೌಲಿಕ್' ಚಂಡಮಾರುತಕ್ಕೆ ಇಲ್ಲಿನ ಫುಜಿಯಾನ್ ಪ್ರಾಂತ್ಯ ತತ್ತರಿಸಿದ್ದು, ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಹುವಾಂಕ್ವಿನ ಪೆನ್ನಿಸುಲಾದಲ್ಲಿ ಭೂ ಕುಸಿತ ಸಂಭವಿಸಿದ್ದು, ತೈವಾನ್ ನಡುವಿನ ನೌಕಾ ಸಾರಿಗೆ ಮತ್ತು ಫುಜೌ, ಕ್ಸಿಯಾಮಿನ್ ಹಾಗೂ ಮಿಜೌ ಬಂದರುಗಳಲ್ಲಿ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಹಾನಿಗೊಂಡಿರುವ ಸ್ಥಳಗಳಲ್ಲಿ ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಏಳನೇ ಸಲ ಕಾಣಿಸಿಕೊಂಡಿರುವ `ಸೌಲಿಕ್' ಚಂಡಮಾರುತ ಗಂಟೆಗೆ 118 ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಸಮುದ್ರದಲ್ಲಿ 6ರಿಂದ 10 ಮೀಟರ್‌ನಷ್ಟು ಎತ್ತರದ ದೈತ್ಯ ಅಲೆಗಳು ಎದ್ದಿವೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌ಎಂಸಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.