ಲಂಡನ್(ಪಿಟಿಐ): ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಚರ್ಮ ಸುಕ್ಕುಗಟ್ಟುತ್ತದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ಗಂಟೆಗಟ್ಟಲೆ ಸ್ಮಾರ್ಟ್‌ಫೋನ್ ಬಳಸುವುದರಿಂದ ಮುಖ, ಕತ್ತು, ಕೆನ್ನೆ ಮೇಲಿನ ಚರ್ಮದಲ್ಲಿ ಸುಕ್ಕುಗಳಾಗುತ್ತವೆ. ಕತ್ತುಗಳಲ್ಲಿ ಸೂಕ್ಷ್ಮ ನೆರಿಗೆಗಳು ಮೂಡುತ್ತವೆ ಎಂದು ಸಿಎಸಿಐ ಅಂತರರಾಷ್ಟ್ರೀಯ ಸಂಸ್ಥೆ ಅಧ್ಯಯನ ಹೇಳಿದೆ.
ದೇಹ ಚಲನೆಯಿಂದ ಮೊಬೈಲ್ ಚಾರ್ಜ್
ನ್ಯೂಯಾರ್ಕ್ (ಪಿಟಿಐ): ದೇಹ ಚಲನೆಯಿಂದಲೇ ವಿದ್ಯುತ್ ಉತ್ಪಾದನೆಯಾಗಿ ಅದು ಮೊಬೈಲನ್ನು ಚಾರ್ಜ್ ಮಾಡುವಂತಹ ವಿನೂತನ ಸಾಧನವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಜಾರ್ಜಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆ ಸಂಶೋಧಕರು ಈ ಮಹತ್ವದ ಸಾಧನ ಅಭಿವೃದ್ಧಿಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.