ADVERTISEMENT

ಸ್ವಿಸ್ ಬ್ಯಾಂಕ್ ಉದ್ಯೋಗಿಯ ಬಂಧನ, ತನಿಖೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಜೂರಿಚ್ (ಎಪಿ): ಶ್ರೀಮಂತ ತೆರಿಗೆ ವಂಚಕರ ದಾಖಲುಪತ್ರಗಳ ವಿವರ ಪಟ್ಟಿಯನ್ನು ‘ವಿಕಿಲೀಕ್ಸ್’ಗೆ ಹಸ್ತಾಂತರ ಮಾಡಿದ ಆರೋಪದ ಮೇಲೆ ಸ್ವಿಸ್ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಬಂಧಿಸಿ, ಅವರ ವಿರುದ್ಧ ಸ್ವಿಟ್ಜರ್‌ಲೆಂಡ್ ಅಭಿಯೋಜಕರು ಹೊಸ ಅಪರಾಧ ತನಿಖೆ ಆರಂಭಿಸಿದ್ದಾರೆ.

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜ್‌ಗೆ  ಅಂಕಿ ಅಂಶಗಳ ಎರಡು ಸಿ.ಡಿ.ಗಳನ್ನು ಹಸ್ತಾಂತರಿಸಲು ಸೋಮವಾರ ಲಂಡನ್‌ಗೆ ತೆರಳಿದ್ದ ಸ್ವಿಸ್ ಬ್ಯಾಂಕ್ ಉದ್ಯೋಗಿ ರುಡಾಲ್ಫ್ ಎಲ್ಮರ್ ಅವರನ್ನು ಬುಧವಾರ ಸಂಜೆ ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಇಲ್ಲಿನ ಮುಖ್ಯ ಅಭಿಯೋಜಕ ಪೀಟರ್ ಪೆಲ್ಲೆಗ್ರಿನಿ ಗುರುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.