ADVERTISEMENT

ಹಾಕಿಂಗ್ ಅವರ ಅತ್ಯಾಧುನಿಕ ಗಾಲಿಕುರ್ಚಿ ಪ್ರದರ್ಶನಕ್ಕೆ

ಪಿಟಿಐ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಸ್ಟೀಫನ್ ಹಾಕಿಂಗ್
ಸ್ಟೀಫನ್ ಹಾಕಿಂಗ್   

ಲಂಡನ್ : ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ (76) ಬಳಸುತ್ತಿದ್ದ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ್ದ ಗಾಲಿಕುರ್ಚಿಯನ್ನು ವಸ್ತುಸಂಗ್ರಹಾಲಯಲ್ಲಿ ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ.

ಗಾಲಿಕುರ್ಚಿ ಹಾಗೂ ಹಾಕಿಂಗ್ ಅವರು ಧ್ವನಿ ಹೊರಡಿಸಲು ಬಳಸುತ್ತಿದ್ದ ವ್ಯವಸ್ಥೆಯನ್ನು ಅವರ ನೆನಪಿಗಾಗಿ ಜೀವಂತವಾಗಿರಿಸುವ ಉದ್ದೇಶವನ್ನು ಕುಟುಂಬ ಹೊಂದಿದೆ. ವಸ್ತು ಸಂಗ್ರಹಾಲಯಗಳಿಂದ ಬಂದಿರುವ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸೂಚನೆ ನೀಡಿದೆ.

ಹಾಕಿಂಗ್ ಅವರ ಜೀವನ, ಅವರ ಭಾಷಣಗಳು ಹಾಗೂ ಅವರು ಬಳಸುತ್ತಿದ್ದ ಗಾಲಿಕುರ್ಚಿಯನ್ನು ಪ್ರದರ್ಶನಕ್ಕಿಡುವ ಪ್ರಸ್ತಾವ ಲಂಡನ್‌ನ ಸೈನ್ಸ್ ಮ್ಯೂಸಿಯಂನಿಂದ ಬಂದಿದ್ದು, ಕುಟುಂಬದ ಪರಿಶೀಲನೆಯ ಹಂತದಲ್ಲಿದೆ.

ADVERTISEMENT

ಸ್ವೀಡನ್‌ನಲ್ಲಿ ನಿರ್ಮಿಸಿದ್ದ ಗಾಲಿಕುರ್ಚಿಗೆ ಚೀನಾ ನಿರ್ಮಿತ ಲೆನೆವೊ ಕಂಪ್ಯೂಟರ್, ಅಮೆರಿಕ ನಿರ್ಮಿತ ಇನ್‌ಫ್ರಾರೆಡ್ ಕ್ಯಾಮೆರಾ ಅಳವಡಿಸಲಾಗಿತ್ತು. ಅಮೆರಿಕದ ವಿಜ್ಞಾನಿ ಡೆನ್ನಿಸ್ ಕ್ಲಾಟ್ ಅವರು ಹಾಕಿಂಗ್ ಅವರ ಧ್ವನಿಯನ್ನು ಅಭಿವೃದ್ಧಿಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.