ADVERTISEMENT

2017ರ ಆಸ್ಕರ್‌ ಪ್ರಶಸ್ತಿ: ಮೂನ್‌ಲೈಟ್‌ ಅತ್ಯುತ್ತಮ ಚಿತ್ರ

ಏಜೆನ್ಸೀಸ್
Published 27 ಫೆಬ್ರುವರಿ 2017, 7:13 IST
Last Updated 27 ಫೆಬ್ರುವರಿ 2017, 7:13 IST
2017ರ ಆಸ್ಕರ್‌ ಪ್ರಶಸ್ತಿ: ಮೂನ್‌ಲೈಟ್‌ ಅತ್ಯುತ್ತಮ ಚಿತ್ರ
2017ರ ಆಸ್ಕರ್‌ ಪ್ರಶಸ್ತಿ: ಮೂನ್‌ಲೈಟ್‌ ಅತ್ಯುತ್ತಮ ಚಿತ್ರ   

ಲಾಸ್‌ ಏಂಜಲೀಸ್‌: 89ನೇ ಅಕಾಡೆಮಿ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ‘ಲಾ ಲಾ ಲ್ಯಾಂಡ್‌ ’ ಚಿತ್ರದ ಮೂಲಕ ಯುವ ನಿರ್ದೇಶಕ ಡ್ಯಾಮಿಯೆನ್‌ ಚಾಝೆಲ್ಲೆ ಅತ್ಯುತ್ತಮ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ಮಹೆರ್ಷಲಾ ಅಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂನ್‌ಲೈಟ್‌ ಚಿತ್ರದಲ್ಲಿನ ನಟನೆಗಾಗಿ ಅಲಿ ಪ್ರಶಸ್ತಿ ಪಡೆದಿದ್ದು, ನಟನಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟನಾಗಿದ್ದಾರೆ.

ಸಿನಿಮಾ ನಿರ್ಮಾಣದಲ್ಲಿ ಆರು ವರ್ಷ ಶ್ರಮಿಸಿರುವ 32 ವರ್ಷ ವಯಸ್ಸಿನ ನಿರ್ದೇಶಕ ಚಾಝೆಲ್ಲೆ ಅವರ ಸಂಗೀತಮಯ ಪ್ರೇಮಕಥೆ ‘ಲಾ ಲಾ ಲ್ಯಾಂಡ್‌’ಗೆ 2017ರ ಅತ್ಯುತ್ತಮ ನಿರ್ದೇಶಕ ಆಸ್ಕರ್‌ ಪ್ರಶಸ್ತಿ ಲಭಿಸಿದೆ.

‘ಮೂನ್‌ಲೈಟ್‌’ ಸಿನಿಮಾ ಈ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.


ಆಸ್ಕರ್‌ ಹಿನ್ನೆಲೆ:
ಯು.ಎಸ್‌. ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಅಂಡ್‌ ಸೈನ್ಸಸ್‌ ಪ್ರತಿವರ್ಷ ಕೊಡುವ ಅಕಾಡೆಮಿ ಪ್ರಶಸ್ತಿಗಳು ಚಿತ್ರರಂಗದಲ್ಲಿಯೇ ಪ್ರತಿಷ್ಠಿತವಾದವು.  1929ರ ಮೇ 16ರಂದು ಆಸ್ಕರ್‌ ಪ್ರಶಸ್ತಿ ನೀಡುವುದು ಪ್ರಾರಂಭವಾಯಿತು.

ಸಿನಿಮಾ ರೀಲ್‌ನ ಮೇಲೆ ಮನುಷ್ಯಾಕೃತಿಯ ಪ್ರತಿಮೆ ನಿಂತಿರುವ ಸ್ಮರಣಿಕೆಯನ್ನು ಆಸ್ಕರ್‌ ಎಂದು ಕರೆಯುತ್ತಾರೆ. ಈ ಸ್ಮರಣಿಕೆಯು ಗೌರವದ ದೊಡ್ಡ ಸಂಕೇತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.