ADVERTISEMENT

21,196.18 ಕಿ.ಮೀ ಮಹಾಗೋಡೆ!

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST
21,196.18 ಕಿ.ಮೀ ಮಹಾಗೋಡೆ!
21,196.18 ಕಿ.ಮೀ ಮಹಾಗೋಡೆ!   

ಬೀಜಿಂಗ್ (ಪಿಟಿಐ): ಸುಮಾರು 2,200 ವರ್ಷಗಳಿಗೂ ಹಿಂದೆ ಕಟ್ಟಿದ ಚೀನಾದ ಮಹಾ ಗೋಡೆಯ ಉದ್ದ ಇಂದಿಗೂ ನಿಗೂಢವಾಗಿಯೇ ಇದೆ. 

 ಇದು 8,851.8 ಕಿ.ಮೀ ಉದ್ದ ಇದೆ ಎಂದು ಈ ಮೊದಲು ಮಾಡಿದ ಅಳತೆಯಿಂದ ಗೊತ್ತಾಗಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ ಇದು ಈ ಹಿಂದಿನ ಅಳತೆಗಿಂತಲೂ 2.4ರಷ್ಟು ಉದ್ದ ಇದೆ. ಪುರಾತತ್ವಜ್ಞರು ಈ ಮಹಾ ಗೋಡೆಗೆ ಸಂಬಂಧಿಸಿದ 43,721 ಸ್ಥಳಗಳನ್ನು ಗುರುತಿಸಿದ್ದಾರೆ. ಅಲ್ಲದೇ ಇದು  21,196.18 ಕಿ.ಮೀ ಉದ್ದ ಇದೆ ಎಂದು ಹೇಳಿದ್ದಾರೆ.

ಈ ಮೊದಲು ಮಿಂಗ್ ರಾಜಮನೆತನ (1368-1644)ಕಟ್ಟಿದ ಗೋಡೆಯನ್ನು ಮಾತ್ರ ಅಳೆಯಲಾಗಿತ್ತು. ಆದರೆ ಈಗ ಉಳಿದ ರಾಜಮನೆತನಗಳ ಅವಧಿಯಲ್ಲಿ ಕಟ್ಟಲಾದ ಗೋಡೆಯನ್ನೂ ಅಳೆಯಲಾಗಿದ್ದು, ಇದರ ಒಟ್ಟು ಉದ್ದ 21,196.18 ಕಿ.ಮೀ ಇದೆ ಎಂದು ಚೀನಾ ಗ್ರೇಟ್ ವಾಲ್ ಸೊಸೈಟಿ ನಿರ್ದೇಶಕ ಯಾನ್ ಜಿಯಾಮಿನ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.