ADVERTISEMENT

ಚಾಲಕರಹಿತ ನೌಕೆಯ ಪರೀಕ್ಷೆ ಯಶಸ್ವಿ

ಪಿಟಿಐ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಬೀಜಿಂಗ್‌: ಚೀನಾ ದೇಶಿಯವಾಗಿ ಅಭಿವೃದ್ಧಿಪಡಿಸಿದ ನೀರಿನೊಳಗೆ ಚಲಿಸುವ ಚಾಲಕರಹಿತ ನೌಕೆಯ (ಗ್ಲೈಡರ್‌) ಪರೀಕ್ಷೆಯು ಯಶಸ್ವಿಯಾಗಿದೆ. ಇದರಿಂದ ಹಿಂದೂ ಮಹಾಸಾಗರ, ದಕ್ಷಿಣ ಚೀನಾದ ಸಮುದ್ರದ ಕಣ್ಗಾವಲು ಜಾಲ ನಿಗಾವಹಿಸಲು ಸಹಕಾರಿಯಾಗಲಿದೆ. ಈ ನೌಕೆಯಿಂದ ಚೀನಾದ ಜಲಾಂತರ್ಗಾಮಿಗಳು ಶತ್ರುಪಡೆಗಳ ಮೇಲೆ ನಿಖರ ದಾಳಿ ನಡೆಸಲು ಸಾಧ್ಯವಾಗಲಿದೆ.

ನೌಕೆಗೆ ‘ಹೈಯಿ’ ಎಂದು ಹೆಸರಿಸಲಾಗಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಚೀನಾ ಸಂಪೂರ್ಣವಾಗಿ ದೇಶಿಯ ಉಪಕರಣವನ್ನು ಬಳಸಿದೆ‘ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಡಿಸೆಂಬರ್‌ 11ರಿಂದ ಜನವರಿ 2ರ ತನಕ ಸಮುದ್ರದ ಒಳಗಿನ ವಾತವರಣದ ಮೇಲೆ ನಿಗಾ, ಜಾಗತಿಕ ತಾಪಮಾನದ ಪರಿಣಾಮ ಮತ್ತು ಸಾಗರದ ಸ್ಥಿತಿಗತಿ ಮೇಲೂ ಗ್ಲೈಡರ್‌ನಿಂದ ನಿಗಾವಹಿಸಲಾಗಿತ್ತು’ ಎಂದು ಚೀನಾ ವಿಜ್ಞಾನ ಕೇಂದ್ರದ ಗ್ಲೈಡರ್‌ ವಿಭಾಗದ ಸಂಶೋಧಕ ಯು ಜಿಯಾಚೆಂಗ್‌ ತಿಳಿಸಿದ್ದಾರೆ.

ADVERTISEMENT

ಹೊಸ ಮಾದರಿಯ ಯುದ್ಧನೌಕೆ ನಿರ್ಮಾಣ: ಕ್ಷಿಪಣಿ, ನೌಕೆ ಹಾಗೂ ಜಲಾಂತರ್ಗಾಮಿ ನಿರೋಧಕ ಅಸ್ತ್ರಗಳನ್ನು ಹೊಂದಿದ ಹೊಸ ಮಾದರಿಯ ಯುದ್ಧ ನೌಕೆಯೊಂದನ್ನು ಚೀನಾ ನಿರ್ಮಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶಾಂಘೈನ ಜಿಯಾಂಗ್ನಾನ್‌ ಹಡಗುಕಟ್ಟೆಯಲ್ಲಿ 10,000 ಟನ್‌ ಭಾರದ ಈ ಯುದ್ಧ ನೌಕೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಹೇಳಿವೆ.

‘ನೌಕಾ ಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ, ಸೈನಿಕರು ಮತ್ತು ಅಧಿಕಾರಿಗಳ ಸಲಹೆ ಪಡೆದು ಅವರಿಗೆ ಅನುಕೂಲವಾಗುವಂತೆ ನೌಕೆಯನ್ನು ನಿರ್ಮಿಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಯುದ್ಧ ನೌಕೆಯನ್ನು ಪರೀಕ್ಷೆ ನಡೆಸಿದ ಬಳಿಕ ನೌಕಾಪಡೆಯ ಸೇವೆಗೆ ನಿಯೋಜನೆ ಮಾಡಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.