ADVERTISEMENT

ಕಟಕ್‌ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ

ಪಿಟಿಐ
Published 4 ಫೆಬ್ರುವರಿ 2018, 19:25 IST
Last Updated 4 ಫೆಬ್ರುವರಿ 2018, 19:25 IST
ಕಟಕ್‌ನ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡ ಪಿಟಿಐ ಚಿತ್ರ
ಕಟಕ್‌ನ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡ ಪಿಟಿಐ ಚಿತ್ರ   

ಕಟಕ್: ಇಲ್ಲಿನ ಶಾಪಿಂಗ್‌ ಮಾಲ್‌ನಲ್ಲಿ ಭಾನುವಾರ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಅಂಗಡಿಗಳು ಭಸ್ಮವಾಗಿವೆ. ಬೆಂಕಿ ಇತರ ನಾಲ್ಕು ಅಂಗಡಿಗಳಿಗೂ ಹಬ್ಬಿತ್ತು. ಮಾಲ್‌ನಲ್ಲಿ 50 ಉದ್ಯೋಗಿಗಳು ಇದ್ದರು. ಆದರೆ ಅವರಿಗೆ ಯಾವುದೇ ತೊಂದರೆಯಾಗಿರುವ ಬಗ್ಗೆ ವರದಿಯಾಗಿಲ್ಲ. ಒಟ್ಟು ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಬಟ್ಟೆ ಮಳಿಗೆಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. 17 ಅಗ್ನಿಶಾಮಕ ವಾಹನಗಳಲ್ಲಿ 150 ಸಿಬ್ಬಂದಿ, ಪೊಲೀಸ್‌ ಮತ್ತು ಒಡಿಶಾ ವಿಪತ್ತು ತಡೆ ಕ್ಷಿಪ್ರ ಕಾರ್ಯಾಚರಣೆ ‍ತಂಡ ಬೆಂಕಿ ನಂದಿಸಿದವು. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಬೆಂಕಿಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಎಂದು ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಬಿ.ಕೆ.ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT