ADVERTISEMENT

ಗಯಾನಾ: ಶಾಲಾ ವಸತಿ ನಿಲಯದಲ್ಲಿ ಬೆಂಕಿ– 20 ವಿದ್ಯಾರ್ಥಿಗಳು ಸಾವು

ಎಪಿ
Published 22 ಮೇ 2023, 15:55 IST
Last Updated 22 ಮೇ 2023, 15:55 IST
   

ಗಯಾನಾ: ಗಯಾನಾದ ಶಾಲಾ ವಸತಿ ನಿಲಯದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 20 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಜಾರ್ಜ್‌ಟೌನ್‌ನಿಂದ ದಕ್ಷಿಣಕ್ಕೆ 200 ಮೈಲಿ ದೂರದಲ್ಲಿರುವ ಮದಿಯಾ ನಗರದ ಮಾಧ್ಯಮಿಕ ಶಾಲೆಯ ವಸತಿ ನಿಲಯದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಗಯಾನ ಸರ್ಕಾರ  ಹೇಳಿಕೆಯಲ್ಲಿ ತಿಳಿಸಿದೆ.

‘ಇದೊಂದು ದೊಡ್ಡ ವಿಪತ್ತು. ಅವಘಡದಲ್ಲಿ ಹಲವು ಮಕ್ಕಳನ್ನು ಕಳೆದುಕೊಂಡಿದ್ದೇವೆ. ಗಾಯಾಳು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಘಡ ಸಂಭವಿಸಿದ ಸ್ಥಳಕ್ಕೆ ಖಾಸಗಿ ಮತ್ತು ಮಿಲಿಟರಿ ವಿಮಾನಗಳನ್ನು ಕಳುಹಿಸಲಾಗಿದೆ’ ಎಂದು ದಕ್ಷಿಣ ಅಮೆರಿಕ ಅಧ್ಯಕ್ಷ ಇರ್ಫಾನ್ ಅಲಿ  ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.