ADVERTISEMENT

ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತ, ಜನಜೀವನ ಅಸ್ತವ್ಯಸ್ತ

ಏಜೆನ್ಸೀಸ್
Published 25 ಅಕ್ಟೋಬರ್ 2021, 6:11 IST
Last Updated 25 ಅಕ್ಟೋಬರ್ 2021, 6:11 IST
ಕ್ಯಾಲಿಫೋರ್ನಿಯಾದ ಪ್ಲುಮಾಸ್‌ ಕೌಂಟಿಯಲ್ಲಿ ಭಾರಿ ಮಳೆಯಿದ ಹೆದ್ದಾರಿಗೆ ಮಣ್ಣು ಕುಸಿದಿರುವುದು  –ಎಪಿ ಚಿತ್ರ
ಕ್ಯಾಲಿಫೋರ್ನಿಯಾದ ಪ್ಲುಮಾಸ್‌ ಕೌಂಟಿಯಲ್ಲಿ ಭಾರಿ ಮಳೆಯಿದ ಹೆದ್ದಾರಿಗೆ ಮಣ್ಣು ಕುಸಿದಿರುವುದು  –ಎಪಿ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ: ಈಚೆಗೆ ಕಾಳ್ಗಿಚ್ಚಿನಿಂದ ಬೆಂದು ಹೋಗಿದ್ದ ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಮಳೆ ಸುರಿಯುತ್ತಿದೆ ಹಾಗೂ ಹಲವೆಡೆ ಹೆದ್ದಾರಿಗಳು ಬಂದ್‌ ಆಗಿವೆ.

ಸ್ಯಾನ್‌ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಾದ್ಯಂತ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆಯಾಗಿ ಬರ್ಕ್ಲಿಯಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ.

ನಾಪಾ ಮತ್ತು ಸೋನೊಮಾ ಕೌಂಟಿಗಳಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಹಲವೆಡೆ ಜನರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.