ADVERTISEMENT

ಪೆನ್ಸಿಲ್ವೇನಿಯಾ ಫಲಿತಾಂಶ ತಡೆ: ಪ್ರಕರಣ ವಜಾಗೊಳಿಸಿದ ನ್ಯಾಯಾಲಯ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ತಂಡಕ್ಕೆ ಹಿನ್ನಡೆ

ಪಿಟಿಐ
Published 22 ನವೆಂಬರ್ 2020, 6:24 IST
Last Updated 22 ನವೆಂಬರ್ 2020, 6:24 IST
ಪೆನ್ಸಿಲ್ವೇನಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ವೇಳೆ ನಡೆದ ಮತದಾನದ ದೃಶ್ಯ(ಸಂಗ್ರಹ ಚಿತ್ರ)
ಪೆನ್ಸಿಲ್ವೇನಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ವೇಳೆ ನಡೆದ ಮತದಾನದ ದೃಶ್ಯ(ಸಂಗ್ರಹ ಚಿತ್ರ)   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪೆನ್ಸಿಲ್ವೇನಿಯಾ ಕ್ಷೇತ್ರದ ಫಲಿತಾಂಶಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಫೆಡರಲ್ ಕೋರ್ಟ್‌ನ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ಅರ್ಜಿ ಜತೆಗೆ ಸಲ್ಲಿಸಿರುವ ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲ ಅವರು ಹೇಳಿದ್ದಾರೆ.

ಇದರಿಂದಾಗಿ ನವೆಂಬರ್ 3ರ ಚುನಾವಣಾ ಫಲಿತಾಂಶಗಳ ವಿರುದ್ಧ ಹೋರಾಟಕ್ಕಿಳಿದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಬಹುದೊಡ್ಡ ಹಿನ್ನೆಡೆ ಆದಂತಾಗಿದೆ.

ಪೆನ್ಸಿಲ್ವೇನಿಯಾ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಟ್ರಂಪ್ ವಿರುದ್ಧ ಜಯಗಳಿಸಿದ್ದಾರೆ. ಈ ಕ್ಷೇತ್ರದ ಮತ ಎಣಿಕೆಯಲ್ಲಿ ಮೋಸ ನಡೆದಿದೆ, ಹಾಗಾಗಿ ಫಲಿತಾಂಶವನ್ನು ತಡೆ ಹಿಡಿಯಬೇಕು ಎಂದು ಕೋರಿ ಡೊನಾಲ್ಡ್ ಟ್ರಂಪ್ ನ್ಯಾಯಾಲಯದ ಮೊರೆ ಹೋಗಿದ್ದರು.

ADVERTISEMENT

‘ಟ್ರಂಪ್ ಅವರು ನೀಡಿರುವ ಕಾರಣ ಮತ್ತು ಸಾಕ್ಷಿಗಳು ಸಮರ್ಪಕವಾಗಿಲ್ಲ’ ಎಂದು ಹೇಳಿದ ಅಮೆರಿಕದ ಪೆನ್ಸಿಲ್ವೇನಿಯಾದ ನ್ಯಾಯಾಧೀಶ ಮ್ಯಥ್ಯೂ ಬ್ರಾನ್ನ ಅವರು ಈ ಪ್ರಕರಣವನ್ನು ವಜಾಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.