ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಿಂದ ಇಳಿಯುವ ವೇಳೆ ಭಾರತದ ಪರ್ವತಾರೋಹಿಯೊಬ್ಬರು ಮೃತಪಟ್ಟಿದ್ದಾರೆ.
‘ಎತ್ತರ ಪ್ರದೇಶಗಳಲ್ಲಿ ಸಂಭವಿಸಬಹುದಾದ ಆರೋಗ್ಯ ಸಮಸ್ಯೆಯಿಂದಾಗಿ ಪಶ್ಚಿಮ ಬಂಗಾಳದ ಸುಬತ್ರಾ ಘೋಷ್ ಅವರು ಮೃತಪಟ್ಟಿದ್ದಾರೆ. ಎವರೆಸ್ಟ್ ಶಿಖರದಲ್ಲಿ ಈಚೆಗೆ ಮೃತಪಟ್ಟವರಲ್ಲಿ ಇವರು ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ‘ಹಿಮಾಲಯನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
‘ಘೋಷ್ ಅವರು ಶಿಖರವನ್ನು ಏರುವ ವೇಳೆಯು ವಿಳಂಬ ಮಾಡಿದ್ದರು. ಮಧ್ಯಾಹ್ನ 2 ಗಂಟೆಗೆ ಶಿಖರದ ತುದಿಯನ್ನು ತಲುಪಿದ್ದರು. ಇಳಿಯುವ ವೇಳೆ ಅವರು ಧಣಿದಿದ್ದರು’ ಎಂದು ‘ಸ್ನೋವಿ ಹಾರಿಝಾನ್ ಟ್ರೆಕ್ಸ್’ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.