ADVERTISEMENT

‘ಭಾರತೀಯ ಅಮೆರಿಕನ್ನರಿಂದ ಕಡಿಮೆ ದೇಣಿಗೆ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 18:35 IST
Last Updated 18 ಜುಲೈ 2018, 18:35 IST

ವಾಷಿಂಗ್ಟನ್ (ಪಿಟಿಐ): ಅತಿ ಹೆಚ್ಚು ತಲಾವಾರು ಆದಾಯ ಹೊಂದಿರುವ ಜನಾಂಗೀಯರ ಗುಂಪಿನಲ್ಲಿ ಬರುವ ಭಾರತೀಯ ಅಮೆರಿಕನ್ನರು, ವಾರ್ಷಿಕ₹6,862 ಕೋಟಿ(100 ಕೋಟಿ ಡಾಲರ್) ದೇಣಿಗೆ ನೀಡುತ್ತಾರೆ. ಆದರೆ ಇದು, ದೇಣಿಗೆ ನೀಡುವ
ಅವರ ಸಾಮರ್ಥ್ಯದ ಮೂರನೇ ಒಂದು ಭಾಗದಷ್ಟು ಪ್ರಮಾಣ ಮಾತ್ರ ಎಂದು ಸಮೀಕ್ಷೆಯೊಂದು ತಿಳಿಸಿದೆ.

‘ಅಮೆರಿಕನ್ನರು ವಾರ್ಷಿಕವಾಗಿ ತಮ್ಮ ಆದಾಯದ ಶೇ 4ರಷ್ಟು ಭಾಗವನ್ನು ದೇಣಿಗೆ ನೀಡುತ್ತಾರೆ. ಭಾರತೀಯ ಅಮೆರಿಕನ್ನರು ತಮ್ಮ ವಾರ್ಷಿಕ ಆದಾಯದ ಶೇ 1.5ರಷ್ಟು ಭಾಗ ಮಾತ್ರ ದೇಣಿಗೆ ನೀಡುತ್ತಾರೆ. ಆದರೆ ಅವರಿಗೆ ₹20,582 ಕೋಟಿ ದೇಣಿಗೆ ನೀಡುವ ಸಾಮರ್ಥ್ಯ ಇದೆ’ ಎಂದು ಇಂಡಿಯಾಸ್ಪೊರಾ–ಡಾಲ್ಬರ್ಗ್ ಕಮ್ಯುನಿಟಿ ಎಂಗೇಜ್ಮೆಂಟ್ ಸಮೀಕ್ಷೆ ಹೇಳಿದೆ.

ತಾವು ದೇಣಿಗೆ ಕೊಡಬೇಕೆಂದು ಬಯಸಿರುವ ಸಂಸ್ಥೆಗಳ ಬಗ್ಗೆ ಅವರು ನಂಬಿಕೆ ಕಳೆದುಕೊಂಡಿರುವುದೂ ಇಂತಹ ಬೆಳವಣಿಗೆಗೆ ಕಾರಣ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.