ADVERTISEMENT

ಡೊನಾಲ್ಡ್ ಟ್ರಂಪ್ ‘ಮೂರ್ಖ’: ಹಸನ್‌ ರೌಹಾನಿ

ಏಜೆನ್ಸೀಸ್
Published 11 ಫೆಬ್ರುವರಿ 2019, 19:02 IST
Last Updated 11 ಫೆಬ್ರುವರಿ 2019, 19:02 IST
ಹಸನ್ ರೌಹಾನಿ
ಹಸನ್ ರೌಹಾನಿ   

ಟೆಹರಾನ್: ಇರಾನ್ ಕ್ರಾಂತಿಯ 40ನೇ ವರ್ಷಾಚರಣೆಯ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅಮೆರಿಕ ವಿರುದ್ಧ ಹರಿಹಾಯ್ದಿದ್ದಾರೆ.

ಇಲ್ಲಿನ ‘ಆಜಾದಿ ಸ್ಕ್ವೇರ್‌’ನಲ್ಲಿ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರೌಹಾನಿ, ‘ಇರಾನ್‌ ಬೀದಿಗಿಳಿದಿರುವ ಈ ಜನ ಸಮೂಹದ ಮೇಲೆ ಶತ್ರುಗಳು ನಡೆಸುವ ಯಾವ ದಾಳಿಯೂ ಗುರಿ ತಲುಪುವುದಿಲ್ಲ’ ಎಂದರು. ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿಕೊಂಡು ಬಂದಿದ್ದ ಭಾಷಣವನ್ನು ಓದಿದ ರೌಹಾನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ‘ಮೂರ್ಖ’ ಎಂದು ಜರಿದಿದ್ದಾರೆ.

‌ಫೆಬ್ರುವರಿ 1979ರಲ್ಲಿ ಬುರ್ಖಾ ತೊಟ್ಟ ಇರಾನಿ ಮಹಿಳೆಯರು, ಸೈನಿಕರು, ಸೇನಾ ಸಮವಸ್ತ್ರ ತೊಟ್ಟ ಸ್ವಯಂಸೇವಕರು ಹಾಗೂ ಸಾವಿರಾರು ನಾಗರಿಕರು ಸೇರಿ ನಡಸಿದ ಇರಾನ್‌ ಕ್ರಾಂತಿ, ರುಹೊಲ್ಲಾ ಖೊಮೇನಿ ಸರ್ವಾಧಿಕಾರಿ ಆಡಳಿತವನ್ನು ಅಂತ್ಯಗೊಳಿಸುವಲ್ಲಿ ಸಫಲವಾಗಿತ್ತು. ಇದರ 40ನೇ ವರ್ಷಾಚರಣೆ ಸಂದರ್ಭದಲ್ಲಿ ರೌಹಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತ ವೈಖರಿ ಹಾಗೂ ಇರಾನ್ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಬಗ್ಗೆ ಟೀಕಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.