ಮನಿಲಾ: ‘ಕ್ಯಾಥೋಲಿಕ್ ಬಿಷಪ್ಗಳು ಅಯೋಗ್ಯರು. ಅವರನ್ನು ಕೊಲ್ಲಬೇಕು’ ಎಂದು ಫಿಲಿಪ್ಪೀನ್ಸ್ ಅಧ್ಯಕ್ಷರೋಡ್ರಿಗೊ ಡುಟೆರ್ಟ್ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿರುವ ಡುಟೆರ್ಟ್ ಅವರ ಭಾಷಣದಲ್ಲಿ ಈ ಅಂಶ ಪ್ರಸ್ತಾಪವಾಗಿದೆ.ದೇಶದ ಶೇ 85ರಷ್ಟು ಜನರು ಕ್ಯಾಥೋಲಿಕ್ ಸಮುದಾಯದವರೇ ಆಗಿದ್ದಾರೆ.
‘ಇಡೀ ಫಿಲಿಪ್ಪೀನ್ಸ್ನಲ್ಲಿ ಕ್ಯಾಥೋಲಿಕ್ ಚರ್ಚ್ಗಳು ಬೂಟಾಟಿಕೆಯ ಕೇಂದ್ರಗಳು. ಶೇ 90ರಷ್ಟು ಪಾದ್ರಿಗಳು ಸಲಿಂಗಿಗಳು. ಟೀಕೆ ಮಾಡುವುದಷ್ಟೇ ಅವರ ಕೆಲಸ’ ಎಂಬುದಾಗಿ ಡುಟೆರ್ಟ್ ಟೀಕಿಸಿದ್ದಾರೆ ಎಂದು ಇಎಫ್ಇ ನ್ಯೂಸ್ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಫಿಲಿಪ್ಪೀನ್ಸ್ನ ಕ್ಯಾಥೋಲಿಕ್ ಸಭೆ ನಿರಾಕರಿಸಿದೆ.
ಮೂರ್ಖರನ್ನು ನೋಡಲು ಫಿಲಿಪ್ಪೀನ್ಸ್ ಜನರು ಚರ್ಚ್ಗಳಿಗೆ ಹೋಗಬಾರದು ಎಂದು ಇತ್ತೀಚೆಗೆ ಅವರು ಕರೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.