ADVERTISEMENT

ಬರ್ತ್‌ಡೇಗೆ 13 ಜನ: ಕೋವಿಡ್ ನೀತಿ ಉಲ್ಲಂಘಿಸಿದ ನಾರ್ವೆ ಪ್ರಧಾನಿಗೆ ಭಾರೀ ದಂಡ

ಏಜೆನ್ಸೀಸ್
Published 10 ಏಪ್ರಿಲ್ 2021, 10:49 IST
Last Updated 10 ಏಪ್ರಿಲ್ 2021, 10:49 IST
ನಾರ್ವೆ ಪ್ರಧಾನಿ ಎರ್ನಾ ಸೋಲ್‌ಬರ್ಗ್‌
ನಾರ್ವೆ ಪ್ರಧಾನಿ ಎರ್ನಾ ಸೋಲ್‌ಬರ್ಗ್‌   

ಒಸ್ಲೊ:ಕೋವಿಡ್-‌19 ನಿಯಂತ್ರಣಕ್ಕಾಗಿನ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಾರ್ವೆ ಪ್ರಧಾನಿ ಎರ್ನಾ ಸೋಲ್‌ಬರ್ಗ್‌ ಅವರಿಗೆ ಅಲ್ಲಿನ ಪೊಲೀಸರು ದಂಡ ವಿಧಿಸಿದ್ದಾರೆ.

ಹುಟ್ಟುಹಬ್ಬ ಆಚರಣೆಗಾಗಿ ಕೌಟುಂಬಿಕ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪ್ರಧಾನಿ ಸೋಲ್‌ಬರ್ಗ್‌ ಅವರಿಗೆ ₹ 1.75 ಲಕ್ಷ (20,000 ನಾರ್ವೆ ಕ್ರೋನ್ಸ್‌)ದಂಡ ವಿಧಿಸಿರುವುದಾಗಿಪೊಲೀಸ್‌ ಇಲಾಖೆ ಮುಖ್ಯಸ್ಥ ಓಲೆ ಸವೆರುಡ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು. ಹೀಗಾಗಿ ನಿಯಮ ಉಲ್ಲಂಘಿಸಿದ ಕಾರಣ ಪ್ರಧಾನಿಗೆ ದಂಡ ವಿಧಿಸಲಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಪ್ರಧಾನಿ ಎರ್ನಾ ಅವರುತಮ್ಮ 60ನೇ ಜನ್ಮದಿನದ ಆಚರಣೆ ಸಲುವಾಗಿ ಫೆಬ್ರವರಿ ಅಂತ್ಯದಲ್ಲಿಮೌಂಟೇನ್‌ ರೆಸಾರ್ಟ್‌ನಲ್ಲಿ ಎರಡು ದಿನ ಕಾರ್ಯಕ್ರಮ ಆಯೋಜಿಸಿದ್ದರು.ಹತ್ತಕ್ಕಿಂತ ಹೆಚ್ಚು ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸರ್ಕಾರದ ಆದೇಶವಿದ್ದರೂ, ತಮ್ಮ ಕುಟುಂಬದ13 ಸದಸ್ಯರೊಂದಿಗೆಹುಟ್ಟುಹಬ್ಬ ಆಚರಿಸಿಕೊಂಡದ್ದರು. ಬಳಿಕ ಅವರು ಈ ಸಂಬಂಧ ಕ್ಷಮೆ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.