ADVERTISEMENT

ಅಫ್ಗಾನಿಸ್ತಾನದಲ್ಲಿ ಕಾರು ಬಾಂಬ್‌ ಸ್ಫೋಟ: 8 ಮಂದಿ ಸಾವು

ಏಜೆನ್ಸೀಸ್
Published 20 ಡಿಸೆಂಬರ್ 2020, 9:02 IST
Last Updated 20 ಡಿಸೆಂಬರ್ 2020, 9:02 IST
ಕಾಬೂಲ್‌ನಲ್ಲಿ ಕಾರು ಸ್ಪೋಟಗೊಂಡ ಸ್ಥಳವನ್ನು  ಪರಿಶೀಲಿಸುತ್ತಿರುವ ಭದ್ರತಾ ಸಿಬ್ಬಂದಿ   ಪಿಟಿಐ ಚಿತ್ರ
ಕಾಬೂಲ್‌ನಲ್ಲಿ ಕಾರು ಸ್ಪೋಟಗೊಂಡ ಸ್ಥಳವನ್ನು  ಪರಿಶೀಲಿಸುತ್ತಿರುವ ಭದ್ರತಾ ಸಿಬ್ಬಂದಿ   ಪಿಟಿಐ ಚಿತ್ರ   

ಕಾಬೂಲ್: ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಭಾನುವಾರ ಕಾರು ಬಾಂಬ್ ಸ್ಪೋಟಿಸಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವರು ತಿಳಿಸಿದ್ಧಾರೆ.

ಈ ಸ್ಫೋಟದಲ್ಲಿ ಪಾರ್ಲಿಮೆಂಟ್ ಸದಸ್ಯರು ಸೇರಿದಂತೆ 15 ಮಂದಿಗೆ ಗಾಯಗಳಾಗಿವೆ. ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆಂತರಿಕ ಸಚಿವರ ವಕ್ತಾರ ತಾರೀಕ್ ಅರಿಯನ್ ಅವರು ಮಾಹಿತಿ ನೀಡಿದರು.

ಕಾಬೂಲ್‌ನ ಕೋಶಾಲ್ ಖಾನ್ ಪ್ರದೇಶದಿಂದಾಗಿ ಸಚಿವರು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಈ ವೇಳೆ ಹತ್ತಿರದಲ್ಲಿದ್ದ ನಾಗರಿಕರ ಕಾರುಗಳಿಗೂ ಬೆಂಕಿ ತಾಗಿದೆ. ಈ ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.