ADVERTISEMENT

ದಕ್ಷಿಣ ಆಫ್ರಿಕಾ: ಕೊರೊನಾ ವೈರಸ್‌ನ ಎರಡನೇ ಅಲೆ

ದೇಶದಲ್ಲಿ ಹೆಚ್ಚಿದ ಪ್ರಕರಣಗಳು: ಸರ್ಕಾರದ ಘೋಷಣೆ

ಪಿಟಿಐ
Published 10 ಡಿಸೆಂಬರ್ 2020, 7:11 IST
Last Updated 10 ಡಿಸೆಂಬರ್ 2020, 7:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜೊಹಾನ್ಸ್‌ಬರ್ಗ್‌: ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಆರಂಭವಾಗಿದೆ ಎಂದು ದಕ್ಷಿಣ ಆಫ್ರಿಕಾ ಘೋಷಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ದಿನ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಇದುವರೆಗೆ 8.28 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದು, 22,574 ಮಂದಿ ಸಾವಿಗೀಡಾಗಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಆರಂಭವಾಗಿದೆ. ಪ್ರಮುಖವಾಗಿ ವೆಸ್ಟರ್ನ್‌ ಕೇಪ್‌, ಇಸ್ಟರ್ನ್‌ ಕೇಪ್‌, ಕ್ವಾಝುಲುನಟಲ್‌ ಮತ್ತು ಗೌಟೆಂಗ್‌ ಪ್ರಾಂತ್ಯಗಳಲ್ಲಿ ಕಾಣಿಸಿಕೊಂಡಿದೆ’ ಎಂದು ಆರೋಗ್ಯ ಸಚಿವ ಝ್ವೆಲಿ ಖಿಜೆ ತಿಳಿಸಿದ್ದಾರೆ.

ADVERTISEMENT

‘ಕ್ವಾಝುಲುನಟಲ್‌ ಮತ್ತು ಗೌಟೆಂಗ್‌ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಮೊದಲನೇ ಅಲೆಗಿಂತಲೂ ಎರಡನೇ ಅಲೆ ತೀವ್ರಗತಿಯಲ್ಲಿ ಹಬ್ಬುವ ಸಾಧ್ಯತೆ ಇದೆ. ಅದರಲ್ಲೂ 15ರಿಂದ 19ನೇ ವಯೋಮಾನದವರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಳ್ಳುತ್ತಿದೆ’ ಎಂದು ವಿವರಿಸಿದ್ದಾರೆ.

‘ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಟಿಗಳಿಗೆ ತೆರಳುತ್ತಿರುವ ಯುವಕರು ಮಾಸ್ಕ್‌ಗಳನ್ನು ಧರಿಸುತ್ತಿಲ್ಲ ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಯುವಕರ ಓಡಾಟವೂ ಹೆಚ್ಚಾಗಿದೆ. ಹೀಗಾಗಿಯೇ ಯುವಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ’ ಎಂದು ಖಿಜೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.