ADVERTISEMENT

ಅಫ್ಗಾನಿಸ್ತಾನದಲ್ಲಿ ಬಾಂಬ್‌ ದಾಳಿ; ನಾಲ್ವರಿಗೆ ಗಾಯ

ಏಜೆನ್ಸೀಸ್
Published 21 ಏಪ್ರಿಲ್ 2021, 10:02 IST
Last Updated 21 ಏಪ್ರಿಲ್ 2021, 10:02 IST
ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಬುಧವಾರ ಆತ್ಮಾಹುತಿ ದಾಳಿ ನಡೆದ ಸ್ಥಳದ ಬಳಿ ಓಡಾಡುತ್ತಿರುವ ಜನರು                              –ರಾಯಿಟರ್ಸ್‌ ಚಿತ್ರ
ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಬುಧವಾರ ಆತ್ಮಾಹುತಿ ದಾಳಿ ನಡೆದ ಸ್ಥಳದ ಬಳಿ ಓಡಾಡುತ್ತಿರುವ ಜನರು                              –ರಾಯಿಟರ್ಸ್‌ ಚಿತ್ರ   

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವ ಸಂಬಂಧ ತಾನು ಆಯೋಜಿಸಿದ್ದ ಸಭೆಯನ್ನು ಮುಂದೂಡಿರುವುದಾಗಿ ಟರ್ಕಿ ಘೋಷಿಸುವ ಕೆಲ ಗಂಟೆಗಳ ಮೊದಲು ರಾಜಧಾನಿ ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

‘ರಂಜಾನ್‌ ಮಾಸ ಮತ್ತು ಈದ್‌ ಉಲ್‌ ಫಿತರ್ ರಜಾ ದಿನಗಳ ನಂತರ ಸಭೆಯನ್ನು ಆಯೋಜಿಸಲಾಗುವುದು ಎಂದೂ ಟರ್ಕಿ ಹೇಳಿತ್ತು. ಇದರ ಬೆನ್ನಲ್ಲೇ ಈ ಬಾಂಬ್‌ ದಾಳಿ ನಡೆದಿದೆ.

‘ಅಫ್ಗಾನಿಸ್ತಾನದ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇದರಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಗಾಯಗೊಂಡಿದ್ದಾರೆ. ಈವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತಿಲ್ಲ’ ಎಂದು ಆತಂರಿಕ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ಇದು ಈ ವಾರದಲ್ಲಿ ಕಾಬೂಲ್‌ನಲ್ಲಿ ನಡೆದ ಮೊದಲ ದಾಳಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.