ADVERTISEMENT

ಸೌದಿ: ಪ್ರವಾಸಿ ವೀಸಾಗೆ ಅನುಮತಿ

ವಿದೇಶಿ ಮಹಿಳೆಯರಿಗೆ ವಸ್ತ್ರಸಂಹಿತೆ ತೆರವು

ಏಜೆನ್ಸೀಸ್
Published 27 ಸೆಪ್ಟೆಂಬರ್ 2019, 18:58 IST
Last Updated 27 ಸೆಪ್ಟೆಂಬರ್ 2019, 18:58 IST

ರಿಯಾದ್:ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಪ್ರವಾಸಿ ವೀಸಾಕ್ಕೆ ಅನುಮತಿ ನೀಡಿದ್ದು, ಪ್ರವಾಸದ ಸಂದರ್ಭದಲ್ಲಿ ವಿದೇಶಿ ಮಹಿಳೆಯರಿಗೆ ವಸ್ತ್ರಸಂಹಿತೆಯನ್ನೂ ಸಡಿಲಿಸಿದೆ.

ಪ್ರವಾಸೋದ್ಯಮ ಮುಖ್ಯಸ್ಥ ಅಹಮ್ಮದ್ ಅಲ್ ಖತೀಬ್‌ ಈ ವಿಷಯವನ್ನು ಪ್ರಕಟಿಸಿದ್ದು, ’ಈ ಮೂಲಕ ನಾವು ಇತಿಹಾಸ
ನಿರ್ಮಿಸುತ್ತಿದ್ದೇವೆ’ ಎಂದಿದ್ದಾರೆ.

ಅಮೆರಿಕ, ಆಸ್ಟ್ರೇಲಿಯ, ಯೂರೋಪ್‌ನ ಕೆಲವು ರಾಷ್ಟ್ರಗಳು ಸೇರಿದಂತೆ 49 ರಾಷ್ಟ್ರಗಳ ಪ್ರಜೆಗಳು ಆನ್‌ಲೈನ್‌ ಇ–ವೀಸಾ ಅಥವಾ ವಿಮಾನನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ವೀಸಾ ಸೌಲಭ್ಯ ಪಡೆಯಲು ಅರ್ಹರು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.