ADVERTISEMENT

9/11 ಭಯೋತ್ಪಾದನಾ ದಾಳಿಗೆ 21 ವರ್ಷ

ದುಷ್ಕೃತ್ಯದ ನೆನಪಿನಲ್ಲಿ ಮೌನ ಆಚರಿಸಿದ ಅಮೆರಿಕನ್ನರು

ಏಜೆನ್ಸೀಸ್
Published 11 ಸೆಪ್ಟೆಂಬರ್ 2022, 11:00 IST
Last Updated 11 ಸೆಪ್ಟೆಂಬರ್ 2022, 11:00 IST
Visitors look at US flags on the 9/11 Memorial in New York, on September 10, 2022, one day before the 21st anniversary of the attacks on the World Trade Center, Pentagon, and Shanksville, Pennsylvania. 
Visitors look at US flags on the 9/11 Memorial in New York, on September 10, 2022, one day before the 21st anniversary of the attacks on the World Trade Center, Pentagon, and Shanksville, Pennsylvania.    

ನ್ಯೂಯಾರ್ಕ್‌: ಅಮೆರಿಕದಲ್ಲಿ 21 ವರ್ಷಗಳ ಹಿಂದೆ ನಡೆದ ಭೀಕರ ಭಯೋತ್ಪಾದನಾ ದಾಳಿ 9/11 ಅನ್ನು ಅಮೆರಿಕನ್ನರು ಭಾನುವಾರ ಮೌನಾಚರಣೆ, ಮೃತರ ಹೆಸರುಗಳನ್ನು ಓದುವುದು ಹಾಗೂ ಸ್ವಯಂಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನೆನಪಿಸಿಕೊಂಡರು.

2001ರ ಸೆ. 11ರಂದು ಅಪಹರಿಸಲ್ಪಟ್ಟ ಜೆಟ್ ವಿಮಾನಗಳು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳ ನಡೆಸಿದ್ದ ದಾಳಿಯಲ್ಲಿ ಸುಮಾರು ಮೂರು ಸಾವಿರ ಮಂದಿ ಸಾವಿಗೀಡಾಗಿದ್ದರು. ಅವರ ನೆನಪಿಗಾಗಿ ಮೃತರ ಸಂಬಂಧಿಕರು, ಸ್ನೇಹಿತರು ಮತ್ತು ಗಣ್ಯರು ಪೆಂಟಗನ್, ಪೆನ್ಸಿಲ್ವೇನಿಯಾದ ಮೈದಾನದಲ್ಲಿ ನೆರೆದು ಗೌರವ ಸಲ್ಲಿಸಿದರು.

ಅಮೆರಿಕದಾದ್ಯಂತ ವಿವಿಧ ಸಮುದಾಯದವರು ಅಂದು ಮೇಣದಬತ್ತಿ ಹಚ್ಚುವ ಮೂಲಕ ಮೃತರನ್ನು ಸ್ಮರಿಸಿದರು. ಮತ್ತೆ ಕೆಲವರು ಮೃತರ ಗೌರವಾರ್ಥ ದೇಶಪ್ರೇಮದ ದಿನ, ಕೆಲವರು ರಾಷ್ಟ್ರೀಯ ಸೇವೆ ಹೆಸರಿನಲ್ಲಿ ಸ್ವಯಂಸೇವೆಯ ಯೋಜನೆಗಳಲ್ಲಿ ತೊಡಗಿಸಿಕೊಂಡರು.

ADVERTISEMENT

9/11 ದಾಳಿಯ ಬಳಿಕ ಅಮೆರಿಕವು ರಾಷ್ಟ್ರೀಯ ಭದ್ರತಾ ನೀತಿಯನ್ನು ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.