ADVERTISEMENT

ತೋಟಕ್ಕೆ ಮೆರುಗು ನೀಡಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ತೋಟಕ್ಕೆ  ಮೆರುಗು ನೀಡಿ
ತೋಟಕ್ಕೆ ಮೆರುಗು ನೀಡಿ   

ಮನೆಯ ಅಂದ ಹೆಚ್ಚಿಸುವಲ್ಲಿ ಕೈತೋಟದ ಪಾತ್ರ ಮಹತ್ವದ್ದು. ಬರೀ ಗಿಡಗಳನ್ನೇ ಬೆಳೆಸುವುದಕ್ಕಿಂತ ಅದರ ಅಲಂಕಾರಕ್ಕೆ ಒಂದಿಷ್ಟು ಗಮನ ಹರಿಸಿದರೆ ತೋಟ ಇನ್ನಷ್ಟು ಮೆರುಗು ಪಡೆಯುತ್ತದೆ. ಸ್ಥಳ ಚಿಕ್ಕದಿರಲಿ, ದೊಡ್ಡದಿರಲಿ ಅಲಂಕಾರ ಮಾಡುವ ಜಾಣ್ಮೆಯಿದ್ದರೆ ನೋಡುಗರ ಗಮನ ಸೆಳೆಯುವಂತೆ  ಮಾಡಬಹುದು.

* ವಿವಿಧ ಗಾತ್ರ, ಬಣ್ಣಗಳ ಕಲ್ಲುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ  ಇದನ್ನು ಗಿಡಗಳ ಸುತ್ತ ಇಟ್ಟು ಅಲಂಕರಿಸುವ ಕ್ರಮ ಹಳೆಯದು.  ಆದರೂ ಇಂದಿಗೂ ಅದು ಹೆಚ್ಚಿನವರ ಆಯ್ಕೆ.

* ಮರ ಮತ್ತು ಮಣ್ಣಿನಿಂದ ಮಾಡಿರುವ ಪ್ರಾಣಿ, ಪಕ್ಷಿಗಳನ್ನು ತೋಟದ ಮಧ್ಯೆ ಇಡುವುದರಿಂದ ಗಮನ ಸೆಳೆಯುತ್ತದೆ.

ADVERTISEMENT

* ಆಕರ್ಷಕವಾಗಿ ಕಾಣುವ ಬಾಟಲಿಗಳಲ್ಲಿ ಕೊತ್ತಂಬರಿ ಸೊಪ್ಪು, ಮೆಂತ್ಯೆ ಸೊಪ್ಪು ಸೇರಿದಂತೆ ಚಿಕ್ಕ ಗಿಡಗಳನ್ನು ನೆಟ್ಟು ಅದನ್ನು ನೇತು ಹಾಕುವುದರಿಂದ ಕೈತೋಟದ ಮೆರುಗು ಹೆಚ್ಚುತ್ತದೆ.

* ಆಕರ್ಷಕವಾಗಿರುವ ಹೂಕುಂಡಗಳನ್ನು ಆರಿಸಿಕೊಳ್ಳಿ. ಒಂದೇ ಆಕಾರದ ಪಾಟ್‌ಗಳಿಂದ ಬಣ್ಣ, ಆಕಾರದಲ್ಲಿ ವಿಭಿನ್ನತೆಯಿರುವ ಹೂಕುಂಡಗಳನ್ನು ಇರಿಸುವುದರಿಂದ ನೋಡಲು ಚೆಂದವೆನ್ನಿಸುತ್ತದೆ.

* ಹುಲ್ಲುಹಾಸಿನ ಮೇಲೆ ಕಲ್ಲಿನ ಚಿಟ್ಟೆ, ಹೂವಿನ ಚಿತ್ತಾರ ಮೂಡಿಸಿದರೆ ಸುಂದರ ನೋಟವನ್ನು ನೀಡುತ್ತದೆ.

* ಸ್ಥಳ ದೊಡ್ಡದಿದ್ದರೆ, ಹಳೆಯ ಸೈಕಲ್‌ ಮೇಲೆ ಪಾಟ್‌ ಇಟ್ಟು ಅದರಲ್ಲಿ ಹೂವು ಬೆಳೆಯುವ ಬಳ್ಳಿಗಳನ್ನು ನೆಡಬಹುದು.

* ಮನೆಯಲ್ಲಿರುವ ಹಳೆಯ ಡಬ್ಬಿಗಳಲ್ಲಿ   ಚಿತ್ತಾರ ಮೂಡಿಸಿ ಅದರಲ್ಲಿ ಹೂವಿನ ಗಿಡಗಳನ್ನು ಬೆಳೆಸಬಹುದು.

* ಚಿಟ್ಟೆ, ಚಿಕ್ಕ ಹಕ್ಕಿಗಳ ಚಿತ್ರಗಳನ್ನು ಅಲ್ಲಲ್ಲಿ ಅಂಟಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.