ADVERTISEMENT

ಗುರುವಾರ, 12–3–1964

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

3 ಘಟ್ಟದ ಪ್ರಥಮ ರಾಕೆಟ್‌ನ ಯಶಸ್ವೀ ಪ್ರಯೋಗ
ಬಾಲಸೂರ್‌ (ಒರಿಸ್ಸ), ಮಾ. 11– 
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಇಂದು ಬೆಳಿಗ್ಗೆ 10–30 ರಲ್ಲಿ ಚಂಡಿಪುರ್ ಸಮುದ್ರ ಪ್ರಯೋಗ ಕ್ಷೇತ್ರದಲ್ಲಿ ಬಹು ಎತ್ತರದ ಮೂರು ಘಟ್ಟಗಳ ಸಂಕೀರ್ಣ ರಾಕೆಟ್ಟೊಂದನ್ನು ಯಶಸ್ವಿಯಾಗಿ ಹಾರಿಸಿತು.

ವರದಿ ಸಲ್ಲಿಸಲು ತೇಕ್‌ಚಂದ್‌ ಸಮಿತಿಗೆ ಕಾಲಾವಕಾಶ
ನವದೆಹಲಿ, ಮಾ. 11– 
ಪಾನನಿರೋಧಕ್ಕೆ ಸಂಬಂಧಿಸಿದ ತೇಕ್‌ಚಂದ್‌ ಸಮಿತಿಯು ತನ್ನ ವರದಿಯನ್ನು ಯೋಜನಾ ಮಂಡಳಿಗೆ ಸಲ್ಲಿಸುವುದಕ್ಕೆ ನಿಗದಿ ಮಾಡಿದ್ದ ಕಾಲಾವಧಿಯನ್ನು ನಾಲ್ಕು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.